ADVERTISEMENT

10-12ನೇ ತರಗತಿ ಪರೀಕ್ಷೆ: ಆನ್‌ಲೈನ್‌ಗಳಲ್ಲಿ ಸುಳ್ಳು ಮಾಹಿತಿ ಪ್ರಸಾರ– ಸಿಬಿಎಸ್‌ಇ

ಪಿಟಿಐ
Published 5 ಜನವರಿ 2022, 12:40 IST
Last Updated 5 ಜನವರಿ 2022, 12:40 IST
ಸಿಬಿಎಸ್‌ಇ
ಸಿಬಿಎಸ್‌ಇ   

ನವದೆಹಲಿ: 10 ಹಾಗೂ 12ನೇ ತರಗತಿಯ ಎರಡನೇ ಅವಧಿಯ ಬೋರ್ಡ್‌ ಪರೀಕ್ಷೆಗಳ ಕುರಿತು ಆನ್‌ಲೈನ್‌ ವೇದಿಕೆಗಳ ಮೂಲಕ ಸುಳ್ಳು ಮಾಹಿತಿ ಹರಿಬಿಡುತ್ತಿರುವ ಬಗ್ಗೆ ಜನರು ಎಚ್ಚರದಿಂದಿರಬೇಕು ಎಂದು ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಬುಧವಾರ ಹೇಳಿದೆ.

'ಈ ಪರೀಕ್ಷೆಗಳ ಕುರಿತ ಅಧಿಕೃತ ಹಾಗೂ ಇತ್ತೀಚಿನ ಮಾಹಿತಿಯನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿಯೇ ಪಡೆಯಬೇಕು’ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

‘10 ಹಾಗೂ 12ನೇ ತರಗತಿಯ ಎರಡನೇ ಅವಧಿಯ ಬೋರ್ಡ್‌ ಪರೀಕ್ಷೆಗಳ ಮಾದರಿಯಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ ಎಂಬ ತಪ್ಪು ಮಾಹಿತಿಯನ್ನು ಕೆಲವು ಆನ್‌ಲೈನ್‌ ವೇದಿಕೆಗಳು ‘ಬ್ರೇಕಿಂಗ್‌ ನ್ಯೂಸ್‌’ ನಡಿ ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ’ ಎಂದು ಮಂಡಳಿ ತಿಳಿಸಿದೆ.

ADVERTISEMENT

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ, ಕಳೆದ ವರ್ಷ ಜುಲೈನಲ್ಲಿಯೇ ಪರೀಕ್ಷಾ ಮಾದರಿಯಲ್ಲಿ ಬದಲಾವಣೆಗಳನ್ನು ತರಲಾಗಿದೆ. ಮೊದಲ ಅವಧಿಯ ಬೋರ್ಡ್‌ ಪರೀಕ್ಷೆಗಳು ಸಹ ಮುಗಿದಿವೆ. ಕಳೆದ ವರ್ಷ ಘೋಷಿಸಿರುವ ಮಾದರಿಯಲ್ಲಿಯೇ ಎರಡನೇ ಅವಧಿಯ ಪರೀಕ್ಷೆಗಳು ನಡೆಯಲಿವೆ’ ಎಂದೂ ಮಂಡಳಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.