ADVERTISEMENT

ಬಿಜೆಪಿ ಸೇರಲು ಟಿಎಂಸಿ ನಾಯಕರಿಗೆ ಕೇಂದ್ರ ತನಿಖಾ ಸಂಸ್ಥೆಗಳ ಬೆದರಿಕೆ– ಮಮತಾ ಆರೋಪ

ಪಿಟಿಐ
Published 7 ಏಪ್ರಿಲ್ 2024, 14:14 IST
Last Updated 7 ಏಪ್ರಿಲ್ 2024, 14:14 IST
ಮಮತಾ ಬ್ಯಾನರ್ಜಿ– ಪಿಟಿಐ ಚಿತ್ರ
ಮಮತಾ ಬ್ಯಾನರ್ಜಿ– ಪಿಟಿಐ ಚಿತ್ರ   

ಪುರುಲಿಯಾ (ಪಶ್ಚಿಮ ಬಂಗಾಳ): ‘ಕೇಂದ್ರ ತನಿಖಾ ಸಂಸ್ಥೆಗಳು ಟಿಎಂಸಿ ನಾಯಕರಿಗೆ ಬಿಜೆಪಿ ಸೇರಿ ಇಲ್ಲವೇ ಕ್ರಮ ಎದುರಿಸಿ ಎಂಬುದಾಗಿ ಬೆದರಿಕೆ ಹಾಕುತ್ತಿವೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.

ಪುರುಲಿಯಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯ, ಸಿಬಿಐ, ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಐ.ಟಿ ಇಲಾಖೆಯಂತವು ಬಿಜೆಪಿಯ ಅಸ್ತ್ರಗಳಂತೆ ಕೆಲಸ ಮಾಡುತ್ತಿವೆ. ಈ ತನಿಖಾ ಸಂಸ್ಥೆಗಳನ್ನು ಟಿಎಂಸಿ ನಾಯಕರಿಗೆ ಕಿರುಕುಳ ನೀಡಲು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ನರೇಗಾ ಮತ್ತು ಪಿಎಂ-ಆವಾಸ್ ಯೋಜನೆಗಳಡಿ ಪಶ್ಚಿಮ ಬಂಗಾಳಕ್ಕೆ ಕೊಡಬೇಕಿದ್ದ ಅನುದಾನವನ್ನು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಕಸಿದುಕೊಳ್ಳುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು.

ADVERTISEMENT

ರಾಮನವಮಿ ಸಂದರ್ಭದಲ್ಲಿ ಬಿಜೆಪಿ ಕೋಮು ಭಾವನೆಗಳನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿದ ಅವರು, ಯಾವುದೇ ಪ್ರಚೋದನೆಗೆ ಜನರು ಒಳಗಾಗಬಾರದು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.