ADVERTISEMENT

ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: 8ನೇ ವೇತನ ಆಯೋಗ ರಚನೆಗೆ ಸರ್ಕಾರ ಅಸ್ತು

ಪಿಟಿಐ
Published 16 ಜನವರಿ 2025, 10:05 IST
Last Updated 16 ಜನವರಿ 2025, 10:05 IST
<div class="paragraphs"><p>ವೇತನ (ಸಾಂದರ್ಭಿಕ ಚಿತ್ರ)</p></div>

ವೇತನ (ಸಾಂದರ್ಭಿಕ ಚಿತ್ರ)

   

– ಐಸ್ಟಾಕ್ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ನೌಕರರ ವೇತನ ಹಾಗೂ ಪಿಂಚಣಿದಾರ ಭತ್ಯೆಗಳ ಪರಿಷ್ಕರಣೆಗೆ 8ನೇ ವೇತನ ಆಯೋಗ ರಚಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಗುರುವಾರ ತೆಗೆದುಕೊಂಡಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

2016ರಲ್ಲಿ ಏಳನೇ ವೇತನ ಆಯೋಗವನ್ನು ರಚಿಸಲಾಗಿತ್ತು. 2026ರಲ್ಲಿ ಅದರ ಅವಧಿ ಅಂತ್ಯವಾಗಲಿದೆ.

ಆಯೋಗದ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರನ್ನು ಶೀಘ್ರವೇ ನೇಮಕ ಮಾಡಲಾಗುವುದು ಎಂದು ವೈಷ್ಣವ್ ತಿಳಿಸಿದ್ದಾರೆ.

ಏಳನೇ ವೇತನ ಆಯೋಗದ ಅವಧಿ ಪೂರ್ಣಗೊಳ್ಳುವ ಮೊದಲೇ ಶಿಫಾರಸುಗಳನ್ನು ಸ್ವೀಕರಿಸಲು ಸರ್ಕಾರವು ಈ ನಿರ್ಧಾರವನ್ನು ಬಹಳ ಮುಂಚಿತವಾಗಿ ತೆಗೆದುಕೊಂಡಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ದೆಹಲಿ ಸರ್ಕಾರದ ನೌಕರರ ವೇತನವೂ ಪರಿಷ್ಕರಣೆ ಆಗಲಿದೆ. ಆಯೋಗದ ಶಿಫಾರಸುಗಳು ಜಾರಿಯಾದ ಬಳಿಕ ಕೇಂದ್ರ ಹಾಗೂ ದೆಹಲಿ ರಾಜ್ಯ ಸರ್ಕಾರದ 4 ಲಕ್ಷ ನೌಕರರ ವೇತನ ಪರಿಷ್ಕರಣೆ ಆಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.