ADVERTISEMENT

ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರದ ನೌಕರರಿಗೆ ಇದೆ 30 ರಜೆ

ಪಿಟಿಐ
Published 24 ಜುಲೈ 2025, 13:05 IST
Last Updated 24 ಜುಲೈ 2025, 13:05 IST
<div class="paragraphs"><p>AI</p></div>

AI

   

ನವದೆಹಲಿ: ಕೇಂದ್ರ ಸರ್ಕಾರದ ನೌಕರರು ತಮ್ಮ ಅರ್ಹ ರಜೆಗಳೊಂದಿಗೆ ಸೂಕ್ತ ವೈಯಕ್ತಿಕ ಕಾರಣಗಳನ್ನು ನೀಡಿ ಮತ್ತೆ 30 ರಜೆಗಳನ್ನು ಪಡೆಯಲು ನಿಯಮಾವಳಿಗಳಲ್ಲಿ ಸಾಧ್ಯವಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.

ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ಸಲ್ಲಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಮಾಹಿತಿ ನೀಡಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ನೌಕರರು ತಮ್ಮ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದಕ್ಕಾಗಿಯೇ ವಿಶೇಷ ರಜೆ ತೆಗೆದುಕೊಳ್ಳಲು ಅವಕಾಶ ಇದೆಯೇ? ಎಂಬುದರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

‘ಕೇಂದ್ರ ನಾಗರಿಕ ಸೇವೆಗಳ ನಿಯಮಾವಳಿ–1972 ರ ಪ್ರಕಾರ ವಯಸ್ಸಾದ ಪೋಷಕರನ್ನು ನೋಡಿಕೊಳ್ಳುವುದಕ್ಕಾಗಿಯೇ ರಜೆ ತೆಗೆದುಕೊಳ್ಳುವುದೂ ಸೇರಿದಂತೆ ಯಾವುದೇ ವೈಯಕ್ತಿಕ ಸೂಕ್ತ ಕಾರಣಗಳನ್ನು ನೀಡಿ 30 ರಜೆಗಳನ್ನು ಪಡೆಯಲು ಅವಕಾಶ ಇದೆ. ಇದನ್ನು ಬಿಟ್ಟು 30 ಗಳಿಕೆ ರಜೆ, 8 ಸಾಂದರ್ಭಿಕ ರಜೆ, 2 ನಿರ್ಬಂಧಿತ ರಜೆ, 20 ದಿನ ಅರ್ಧ ವೇತನದ ರಜೆ, ಸಾಮಾನ್ಯ ಸಾರ್ವತ್ರಿಕ ರಜೆಗಳು ಕೇಂದ್ರ ಸರ್ಕಾರದ ಅರ್ಹ ನೌಕರರಿಗೆ ವಾರ್ಷಿಕವಾಗಿ ಇರುತ್ತವೆ’ ಎಂದು ಜಿತೇಂದ್ರ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.