ADVERTISEMENT

ಆಮ್ಲಜನಕ ಸಾಗಾಟದ ಹಡಗಿಗೆ ಶುಲ್ಕ ಬೇಡ: ಬಂದರಿಗೆ ಕೇಂದ್ರ ಸೂಚನೆ

ಪಿಟಿಐ
Published 25 ಏಪ್ರಿಲ್ 2021, 11:06 IST
Last Updated 25 ಏಪ್ರಿಲ್ 2021, 11:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಮ್ಲಜನಕ ಮತ್ತು ಸಂಬಂಧಿತ ಉಪಕರಣಗಳನ್ನು ಸಾಗಾಟ ಮಾಡುವ ಹಡಗುಗಳಿಗೆ ವಿಧಿಸುವ ಎಲ್ಲ ಬಗೆಯ ಶುಲ್ಕವನ್ನು ಮನ್ನಾ ಮಾಡುವಂತೆ ಕೇಂದ್ರ ಸರ್ಕಾರ ದೇಶದ ಪ್ರಮುಖ ಬಂದರುಗಳಿಗೆ ಭಾನುವಾರ ಸೂಚನೆ ನೀಡಿದೆ.

ಬಂದರು ಸಚಿವಾಲಯ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಆಮ್ಲಜನಕ ಮತ್ತು ಅದಕ್ಕೆ ಸಂಬಂಧಪಟ್ಟ ಸರಕುಗಳ ಸಾಗಣೆಗೆ ತ್ವರಿತಗತಿಯ ಅನುವು ಮಾಡಿಕೊಡಬೇಕು ಎಂದು ಹೇಳಿದೆ.

ಹಡಗುಗಳ ಅನುಮತಿ, ಲೋಡಿಂಗ್ ಮತ್ತು ಅನ್‌ಲೋಡಿಂಗ್ ಪ್ರಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ನಡೆಸಬೇಕು ಮತ್ತು ಯಾವುದೇ ರೀತಿಯಲ್ಲಿ ತಡಮಾಡುವಂತಿಲ್ಲ, ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಖುದ್ದು ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ADVERTISEMENT

ಜತೆಗೆ ಮೆಡಿಕಲ್ ಗ್ರೇಡ್ ಆಕ್ಸಿಜನ್, ಆಕ್ಸಿಜನ್ ಟ್ಯಾಂಕ್‌, ಆಕ್ಸಿಜನ್ ಬಾಟಲ್, ಪೋರ್ಟೆಬಲ್ ಆಕ್ಸಿಜನ್ ಜನರೇಟರ್‌ನಂತಹ ಉಪಕರಣಗಳನ್ನು ಹಡಗುಗಳ ಮೂಲಕ ಸಾಗಿಸುತ್ತಿದ್ದಲ್ಲಿ, ಅಂತಹ ಹಡಗುಗಳ ಸರಕು ನಿರ್ವಹಣೆಗೆ ಆದ್ಯತೆ ನೀಡಬೇಕು, ಬಂದರಿನಲ್ಲಿ ಯಾವುದೇ ಶುಲ್ಕ ತೆಗೆದುಕೊಳ್ಳಬಾರದು ಎಂದು ಹೇಳಿದೆ.

ದೇಶದಲ್ಲಿ ಕೋವಿಡ್ ಸ್ಥಿತಿ ಉಲ್ಬಣಗೊಂಡಿರುವುದರಿಂದ, ವಿವಿಧ ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.