ADVERTISEMENT

ಸಲಿಂಗ ಮದುವೆಗೆ ಕೇಂದ್ರ ಸರ್ಕಾರದ ವಿರೋಧ

ಏಜೆನ್ಸೀಸ್
Published 25 ಫೆಬ್ರುವರಿ 2021, 18:19 IST
Last Updated 25 ಫೆಬ್ರುವರಿ 2021, 18:19 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಸಲಿಂಗ ವಿವಾಹದ ನೋಂದಣಿಗೆ ಅವಕಾಶ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ. ಸಲಿಂಗ ವಿವಾಹವನ್ನು ನಿಷೇಧಿಸುವುದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. ‘ಮದುವೆ’ ಎಂಬುದು ಎರಡು ವ್ಯಕ್ತಿಗಳ ನಡುವೆ ನಡೆಯುವ ಸಾಮಾಜಿಕವಾಗಿ ಮಾನ್ಯತೆ ಪಡೆದ ಸಮ್ಮಿಲನ. ಇದಕ್ಕೆ ವೈಯಕ್ತಿಕ ಕಾನೂನು ಅಥವಾ ಇತರೆ ಕಾನೂನಿನ ಬೆಂಬಲ ಇದೆ ಎಂದು ಕೇಂದ್ರವು ವಾದಿಸಿದೆ. ಭಿನ್ನ ಲಿಂಗದ ವ್ಯಕ್ತಿಗಳ ನಡುವಣ ಮದುವೆಗೆ ಮಾತ್ರ ಕಾನೂನುಬದ್ಧ ಮಾನ್ಯತೆ ನೀಡಿಕೆಯಲ್ಲಿ ಸರ್ಕಾರದ ನ್ಯಾಯಬದ್ಧ ಹಿತಾಸಕ್ತಿ ಅಡಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

‘ಮದುವೆ ಎಂಬ ಸಂಸ್ಥೆಗೆ ದೇಶದ ಎಲ್ಲ ಭಾಗಗಳಲ್ಲಿ ಪಾವಿತ್ರ್ಯ ಇದೆ. ನಮ್ಮ ದೇಶದಲ್ಲಿ, ಹೆಣ್ಣು ಮತ್ತು ಗಂಡಿನ ನಡುವಣ ಮದುವೆಯ ಬಂಧಕ್ಕೆ ಸಾಂವಿಧಾನಿಕ ಮಾನ್ಯತೆ ಇರುವುದರ ಜತೆಗೆ, ಪದ್ಧತಿಗಳು, ವಿಧಿ ವಿದಾನಗಳು, ಸಾಂಸ್ಕೃತಿಕ ನಿಯಮಗಳು ಮತ್ತು ಸಾಮಾಜಿಕ ಮೌಲ್ಯದ ಬಲ ಇದೆ’ ಎಂದು ಕೇಂದ್ರವು ಹೇಳಿದೆ.ಭಾರತದ ಕುಟುಂಬದ ಪರಿಕಲ್ಪ ನೆಯು ಸಲಿಂಗ ವ್ಯಕ್ತಿಗಳು ಒಟ್ಟಾಗಿ ಬದುಕುವುದು ಮತ್ತು ಲೈಂಗಿಕ ಸಂಬಂಧವನ್ನು ಹೊಂದು ವುದಕ್ಕಿಂತ ಭಿನ್ನವಾದುದು. ಭಾರತದ ಕೌಟುಂಬಿಕ ವ್ಯವಸ್ಥೆಯಲ್ಲಿ ಗಂಡ, ಹೆಂಡತಿ ಮತ್ತು ಮಕ್ಕಳು ಎಂಬುದು ಭಿನ್ನ ಪರಿಕಲ್ಪನೆ ಎಂದು ಸರ್ಕಾರ ವಾದಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT