ADVERTISEMENT

‘ದೇಶವು ಕಾಂಗ್ರೆಸ್‌ ಮುಕ್ತವಾದರೆ ಬಡತನದಿಂದಲೂ ಮುಕ್ತಿ: ರಾಜನಾಥ್ ಸಿಂಗ್

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 19:00 IST
Last Updated 18 ಏಪ್ರಿಲ್ 2019, 19:00 IST
ರಾಜನಾಥ್‌ ಸಿಂಗ್‌
ರಾಜನಾಥ್‌ ಸಿಂಗ್‌   

ಕೋಲ್ಕತ್ತ: ಭಾರತವು ಕಾಂಗ್ರೆಸ್‌ಮುಕ್ತವಾದ ದಿನವೇ ದೇಶವು ಬಡತನದಿಂದಲೂ ಮುಕ್ತಿ ಪಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಬಡತನ ನಿರ್ಮೂಲನ ಮಾಡುವುದಾಗಿ ಜವಾರಹಲಾಲ್‌ ನೆಹರೂ ಅವರ ಕಾಲದಿಂದಲೇ ಕಾಂಗ್ರೆಸ್‌ ಹುಸಿ ಭರವಸೆ ನೀಡುತ್ತಲೇ ಬಂದಿದೆ ಎಂದು ಅವರು ಆರೋಪಿಸಿದ್ದಾರೆ.

‘ತಾಯಿ, ತಾಯ್ನಾಡು ಮತ್ತು ಜನ’ ಎಂಬುದು ಟಿಎಂಸಿಯ ಘೋಷವಾಕ್ಯ. ಇದನ್ನೂ ಸಿಂಗ್‌ ಅವರು ತೀವ್ರವಾಗಿ ಟೀಕಿಸಿದರು. ‘ಮಮತಾ ಅವರು ತಾಯಿ, ತಾಯ್ನಾಡು ಮತ್ತು ಜನ ಎಂಬ ಘೋಷಣೆ ಹೊರಡಿಸಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ತಾಯಿ ಅಥವಾ ಜನರು ಸುರಕ್ಷಿತರಾಗಿಲ್ಲ’ ಎಂದು ಆಪಾದಿಸಿದರು.

ADVERTISEMENT

ಅಧಿಕಾರದಲ್ಲಿದ್ದಾಗ ಎಡರಂಗದ ಕಾರ್ಯಕರ್ತರು ರಾಜಕೀಯ ಹಿಂಸಾಚಾರ ನಡೆಸುತ್ತಿದ್ದರು. ಈಗ ಟಿಎಂಸಿ ಅದನ್ನೇ ಮುಂದುವರಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.