ADVERTISEMENT

‘ಅಗ್ನಿವೀರ’ರ ನಿವೃತ್ತಿ ವಯಸ್ಸು 65ಕ್ಕೆ ಏರಿಸಿ: ಕೇಂದ್ರಕ್ಕೆ ಮಮತಾ ಒತ್ತಾಯ

ಪಿಟಿಐ
Published 27 ಜೂನ್ 2022, 14:18 IST
Last Updated 27 ಜೂನ್ 2022, 14:18 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಬರ್ಧಮಾನ್: ‘ಅಗ್ನಿಪಥ’ ಯೋಜನೆಯಡಿ ನೇಮಕಗೊಂಡ ಸೈನಿಕರ ನಿವೃತ್ತಿ ವಯಸ್ಸನ್ನು 65 ವರ್ಷಕ್ಕೆ ವಿಸ್ತರಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ವನ್ನು ಪ್ರಾರಂಭಿಸಿದೆ’ ಎಂದು ಹೇಳಿದ್ದಾರೆ.

‘ಬಿಜೆಪಿಗಿಂತ ಭಿನ್ನವಾಗಿ ಹೆಚ್ಚು ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು ನನ್ನ ಧ್ಯೇಯವಾಗಿದೆ. ಅವರು ಅಭ್ಯರ್ಥಿಗಳಿಗೆ ನಾಲ್ಕು ತಿಂಗಳು ತರಬೇತಿ ನೀಡಿ, ನಾಲ್ಕು ವರ್ಷದ ಮಟ್ಟಿಗೆ ನೇಮಿಸಿಕೊಳ್ಳುತ್ತಾರೆ. ಆದರೆ, ನಾಲ್ಕು ವರ್ಷಗಳ ಬಳಿಕ ಈ ಸೈನಿಕರು ಏನು ಮಾಡುತ್ತಾರೆ? ಅವರ ಭವಿಷ್ಯವೇನು’ ಎಂದು ಪ್ರಶ್ನಿಸಿದ ಮಮತಾ, ಅಗ್ನಿವೀರರ ನಿವೃತ್ತ ವಯಸ್ಸನ್ನು ಕೇಂದ್ರ ಸರ್ಕಾರವು 65 ವರ್ಷಕ್ಕೆ ಏರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಬಿಜೆಪಿ ತನ್ನದೇ ಆದ ‘ಸಶಸ್ತ್ರ ಕೇಡರ್ ಬೇಸ್’ ಅನ್ನು ನಿರ್ಮಿಸಲು ‘ಅಗ್ನಿಪಥ’ ಯೋಜನೆಯನ್ನು ಬಳಸುತ್ತಿದೆ’ ಎಂದು ಮಮತಾ ಬ್ಯಾನರ್ಜಿ ಈ ಹಿಂದೆ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.