ADVERTISEMENT

ಅಲೋಪತಿ ಕುರಿತು ಅವೈಜ್ಞಾನಿಕ ಹೇಳಿಕೆ: ರಾಮದೇವ್ ವಿರುದ್ಧ ಕ್ರಮಕ್ಕೆ ಐಎಂಎ ಆಗ್ರಹ

ಪಿಟಿಐ
Published 22 ಮೇ 2021, 15:14 IST
Last Updated 22 ಮೇ 2021, 15:14 IST
ಬಾಬಾ ರಾಮ್‌ದೇವ್
ಬಾಬಾ ರಾಮ್‌ದೇವ್   

ನವದೆಹಲಿ: ಅಲೋಪತಿ ಔಷಧ ಮತ್ತು ಚಿಕಿತ್ಸೆ ಕುರಿತು ಅವೈಜ್ಞಾನಿಕ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಅವರ ವಿರುದ್ಧ ಕೇಂದ್ರ ಆರೋಗ್ಯ ಸಚಿವಾಲಯ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಆಗ್ರಹಿಸಿದೆ.

ರಾಮದೇವ್ ತಮ್ಮ ಹೇಳಿಕೆಗಳಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನಿಸಿದ್ದಾರೆ. ಆದ್ದರಿಂದ ಅವರ ವಿರುದ್ಧ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಲಾಗಿದೆ.

‘ಅಲೋಪತಿ ಒಂದು ಮೂರ್ಖ ವಿಜ್ಞಾನವಾಗಿದೆ. ಔಷಧಿ ತೆಗೆದುಕೊಂಡ ಬಳಿಕ ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ. ಜತೆಗೆ, ರೆಮ್ಡಿಸಿವಿರ್ ಸೇರಿದಂತೆ ವಿವಿಧ ಕೋವಿಡ್‌ ಲಸಿಕೆಗಳು ಸೋಂಕು ನಿಯಂತ್ರಿಸುವಲ್ಲಿ ವಿಫಲವಾಗಿದೆ ಸುಳ್ಳು ಮಾಹಿತಿ ಹಂಚಿಕೊಂಡಿದ್ದಾರೆ ಎಂದು ರಾಮ್‌ದೇವ್‌ ಮಾತನಾಡಿರುವ ವಿಡಿಯೊವೊಂದನ್ನು ಭಾರತೀಯ ವೈದ್ಯಕೀಯ ಸಂಘ ಉಲ್ಲೇಖಿಸಿದೆ.

ADVERTISEMENT

ರಾಮದೇವ್, ಸದ್ಯ ಕೋವಿಡ್‌ ಪರಿಸ್ಥಿತಿಯ ಲಾಭ ಪಡೆಯುವುದರ ಜತೆಗೆ ಜನರಲ್ಲಿ ಭಯ ಮತ್ತು ಹತಾಶೆಯ ಭಾವ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.