ADVERTISEMENT

ಸಂರಕ್ಷಿತ 820 ಆರಾಧನಾ ಸ್ಥಳಗಳಿಗೆ ಇಂದಿನಿಂದ ಪ್ರವೇಶ

ಪಿಟಿಐ
Published 7 ಜೂನ್ 2020, 20:26 IST
Last Updated 7 ಜೂನ್ 2020, 20:26 IST

ನವದೆಹಲಿ: ‘ಭಾರತೀಯ ಪುರಾತತ್ವ ಸರ್ವೇಕ್ಷಣಾಸಂಸ್ಥೆಯ (ಎಎಸ್‌ಐ) ನಿರ್ವಹಣೆಯಲ್ಲಿರುವ, 820 ಸಂರಕ್ಷಿತ ಆರಾಧನಾ ಸ್ಥಳಗಳನ್ನು ಸೋಮವಾರದಿಂದ ತೆರೆಯಲು ಅನುಮತಿ ನೀಡಲಾಗಿದೆ’ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್‌ ಪಟೇಲ್‌ ತಿಳಿಸಿದ್ದಾರೆ.

ಒಟ್ಟು 3691 ಸಂರಕ್ಷಿತ ಸ್ಮಾರಕಗಳನ್ನು ಎಎಸ್‌ಐ ನಿರ್ವಹಿಸುತ್ತಿದೆ. ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿದ್ದರಿಂದ ಮಾರ್ಚ್‌ 17ರಿಂದ ಇವೆಲ್ಲವುಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ನೀಲಾ ಮಸೀದಿ, ಲಾಲ್‌ ಗುಂಬಜ್‌ನಂಥ ಧಾರ್ಮಿಕ ಚಟುವಟಿಕೆಗಳು ನಡೆಯುವ, ಸಂರಕ್ಷಿತ ಆರಾಧನಾ ಸ್ಥಳಗಳನ್ನು ಮಾತ್ರ ಸೋಮವಾರದಿಂದ ತೆರೆಯಲಾಗುವುದು. ಆದರೆ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ತೀವ್ರವಾಗಿರುವುದರಿಂದ ಅಲ್ಲಿನ 65 ಸ್ಮಾರಕಗಳು ತೆರೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ADVERTISEMENT

ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಸುರಕ್ಷತಾ ಕ್ರಮವನ್ನು ಸ್ಮಾರಕಗಳ ಅಧಿಕಾರಿಗಳು ಅನುಸರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ತಾಣಗಳಿಗೆ ಭೇಟಿ ನಿಡುವ ಪ್ರವಾಸಿಗರು ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸುವ ನಿಯಮ ಜಾರಿಯಾಗಬಹುದು ಎಂದು ಎಎಸ್‌ಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.