ADVERTISEMENT

ನಾಗರಿಕ ಕೇಂದ್ರಿತ ಸಂವಹನ ಬಲವರ್ಧನೆ: ಅಧಿಕಾರಿಗಳಿಗೆ ಚಿಂತನ ಶಿಬಿರ

ಪಿಟಿಐ
Published 17 ಮೇ 2023, 15:36 IST
Last Updated 17 ಮೇ 2023, 15:36 IST
ಅನುರಾಗ್‌ ಠಾಕೂರ್‌ 
ಅನುರಾಗ್‌ ಠಾಕೂರ್‌    

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೂ ಮುನ್ನ ನಾಗರಿಕ ಕೇಂದ್ರಿತ ಸಂವಹನ ಬಲಪಡಿಸಲು ಮುಂದಾಗಿರುವ ಕೇಂದ್ರ ಸರ್ಕಾರವು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಭಾರತೀಯ ಮಾಹಿತಿ ಸೇವೆಯ (ಐಐಎಸ್‌) ಅಧಿಕಾರಿಗಳಿಗಾಗಿ ಬುಧವಾರ ಚಿಂತನ ಶಿಬಿರ ಹಮ್ಮಿಕೊಂಡಿತ್ತು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್‌ ಠಾಕೂರ್‌, ‘ದೇಶದ ಬಹುಪಾಲು ಜನರಿಗೆ ಮಾಧ್ಯಮಗಳ ಪರಿಚಯವಿಲ್ಲ. ಟಿ.ವಿ, ದಿನಪತ್ರಿಕೆ ಸೇರಿದಂತೆ ಇತರೆ ಸೌಲಭ್ಯಗಳಿಂದ ಇವರು ವಂಚಿತರಾಗಿದ್ದಾರೆ. ಸಮಾಜದಲ್ಲಿನ ಇಂತಹ ವರ್ಗದ ಜನರಿಗೆ ಮಾಹಿತಿ ತಲುಪಿಸುವ ಮಹತ್ತರವಾದ ಜವಾಬ್ದಾರಿ ಐಐಎಸ್‌ ಅಧಿಕಾರಿಗಳ ಮೇಲಿದೆ’ ಎಂದರು.

‘ಮಾಧ್ಯಮಗಳ ವಿಸ್ತಾರ ಹಾಗೂ ಜನರು ಮಾಹಿತಿ ಪಡೆಯುವ ವಿಧಾನಗಳು ಬದಲಾಗುತ್ತಿವೆ. 21ನೇ ಶತಮಾನದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮಾಹಿತಿ ಪ್ರಸರಣದ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.