ADVERTISEMENT

ಕೋವಿಡ್‌: ₹ 890.32 ಕೋಟಿ ನೆರವು ಬಿಡುಗಡೆ

ಪಿಟಿಐ
Published 6 ಆಗಸ್ಟ್ 2020, 12:35 IST
Last Updated 6 ಆಗಸ್ಟ್ 2020, 12:35 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೋವಿಡ್‌–19 ಪರಿಸ್ಥಿತಿ ಕಾರಣದಿಂದಾಗಿ ಆರೋಗ್ಯ ಸೇವೆ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎರಡನೇ ಕಂತಿನಲ್ಲಿ ಒಟ್ಟು ₹ 890.32 ಕೋಟಿ ಬಿಡುಗಡೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕರ್ನಾಟಕ, ತೆಲಂಗಾಣ, ತಮಿಳುನಾಡು, ಕೇರಳವನ್ನು ಒಳಗೊಂಡು ಈ ಮೊತ್ತ ಬಿಡುಗಡೆಯಾಗಿದ್ದು, ಕೋವಿಡ್‌–19 ಪ್ರಕರಣಗಳ ಪ್ರಮಾಣವನ್ನು ಆಧರಿಸಿ ಈ ಆರ್ಥಿಕ ನೆರವನ್ನು ರಾಜ್ಯಗಳಿಗೆ ಹಂಚಿಕೆಯಾಗಲಿದೆ.

ಸೋಂಕು ಪತ್ತೆ ತಪಾಸಣೆಗೆ ಅಗತ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಈ ಮೊತ್ತವನ್ನು ಬಳಸಬೇಕು ಎಂದು ತಿಳಿಸಿದೆ.ಸಿಬಿ– ಎನ್‌ಎಎಟಿ, ಆರ್‌ಟಿ–ಪಿಸಿಆರ್‌ ಆಧಾರಿತ ಮಾದರಿಗಳ ಪರೀಕ್ಷಾ ಯಂತ್ರ ಅಳವಡಿಕೆಗೆ, ಆರ್‌ಎನ್‌ಎ ಕಿಟ್‌ ಖರೀದಿ, ಐಸಿಯು ಬೆಡ್‌ಗಳ ಅಭಿವೃದ್ಧಿ, ಆಮ್ಲಜನಕದ ವ್ಯವಸ್ಥೆಯ ಪ್ರಮಾಣವನ್ನು ಅಧಿಕಗೊಳಿಸುವ ಗುರಿ ಇದೆ.

ADVERTISEMENT

ಕೋವಿಡ್–19 ವಿರುದ್ಧ ಆರೋಗ್ಯ ಸೇವೆ ಕುರಿತು ತುರ್ತು ಅಗತ್ಯಗಳಿಗಾಗಿ ಕೇಂದ್ರ ₹ 15 ಸಾವಿರ ಕೋಟಿ ಪ್ಯಾಕೇಜ್‌ ಒದಗಿಸಿದ್ದು, ಇದರ ಭಾಗವಾಗಿ ಎರಡನೇ ಕಂತು ಬಿಡುಗಡೆಆಗಿದೆ.

ಕಳೆದ ಏಪ್ರಿಲ್‌ನಲ್ಲಿ ₹ 3 ಸಾವಿರ ಕೋಟಿ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಲಾಗಿತ್ತು. ಪರೀಕ್ಷಾ ಸಾಮರ್ಥ್ಯ ಹೆಚ್ಚಳ, ಆಸ್ಪತ್ರೆಗಳ ಮೂಲಸೌಕರ್ಯದ ಅಭಿವೃದ್ಧಿ, ಅಗತ್ಯ ಉಪಕರಣಗಳ ಖರೀದಿ ಸೇರಿದಂತೆ ಔಷಧ ಮತ್ತು ಇನ್ನಿತರ ಸಾಮಗ್ರಿಗಳನ್ನು ಖರೀಸಲು ಸೂಚಿಸಲಾಗಿತ್ತುಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ನೆರವಿನಿಂದಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿಒಟ್ಟು 5,80,342 ಪ್ರತ್ಯೇಕ ಹಾಸಿಗೆಗಳು, 1,36,068 ಆಮ್ಲಜನಕ ಪೂರೈಕೆ ವ್ಯವಸ್ಥೆಯ ಹಾಸಿಗೆ ಮತ್ತು 31,255 ಐಸಿಯು ಹಾಸಿಗೆ ಸೌಲಭ್ಯವು ಲಭ್ಯವಾಗಲಿದೆ ಎಂದು ಆಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.