ADVERTISEMENT

ಖನಿಜ ವಿನಿಮಯ ಕೇಂದ್ರ ತೆರೆಯಲು ಸರ್ಕಾರ ಸಜ್ಜು: ಕಲ್ಲಿದ್ದಲು ಸಚಿವ ಕಿಶನ್ ರೆಡ್ಡಿ

ಪಿಟಿಐ
Published 23 ಆಗಸ್ಟ್ 2025, 12:34 IST
Last Updated 23 ಆಗಸ್ಟ್ 2025, 12:34 IST
ಕಲ್ಲಿದ್ದಲು ನಿಕ್ಷೇಪ- ಪ್ರಾತಿನಿಧಿಕ ಚಿತ್ರ
ಕಲ್ಲಿದ್ದಲು ನಿಕ್ಷೇಪ- ಪ್ರಾತಿನಿಧಿಕ ಚಿತ್ರ   

ಹೈದರಾಬಾದ್‌: ಕೇಂದ್ರ ಸರ್ಕಾರವು ಶೀಘ್ರದಲ್ಲೇ ಖನಿಜ ವಿನಿಮಯ ಕೇಂದ್ರ ಸ್ಥಾಪಿಸಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಜಿ. ಕಿಶನ್‌ ರೆಡ್ಡಿ ಶನಿವಾರ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳಿಗೆ ಅನುಸಾರವಾಗಿ ಖನಿಜ ವಿನಿಮಯ ಕೇಂದ್ರ ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

'ಲಂಡನ್‌ ಲೋಹ ವಿನಿಮಯ ಕೇಂದ್ರದ ಮಾದರಿಯಲ್ಲಿಯೇ ಭಾರತದಲ್ಲಿ ಖನಿಜ ವಿನಿಮಯ ಕೇಂದ್ರ ಸ್ಥಾಪಿಸಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

ADVERTISEMENT

ಪ್ರಸ್ತಾವಿತ ಕೇಂದ್ರವು ಕೈಗಾರಿಕೆಗಳು, ವ್ಯಾಪಾರಿಗಳು ಮತ್ತು ಇತರ ಪಾಲುದಾರರು ಉತ್ತಮ ಬೆಲೆಗೆ ಖನಿಜಗಳನ್ನು ಖರೀದಿಸಲು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ ಎಂದಿದ್ದಾರೆ.

ಅಮೆರಿಕದ ಸುಂಕ ನೀತಿಯಿಂದಾಗಿ ದೇಶೀಯ ಕಲ್ಲಿದ್ದಲು ಉದ್ಯಮದ ಮೇಲೆ ಪರಿಣಾಮ ಉಂಟಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ಅಷ್ಟೇನೂ ಪರಿಣಾಮವಾಗಿಲ್ಲ. ಭಾರತದಿಂದ ಅಮೆರಿಕಕ್ಕೆ ಅಲ್ಪ ಪ್ರಮಾಣದಲ್ಲಿ ಅಲ್ಯೂಮಿನಿಯಂ ರಫ್ತಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.