ADVERTISEMENT

ಸಹಕಾರ ನಿರ್ವಹಣೆ–ಶೀಘ್ರದಲ್ಲೇ ರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪನೆ: ಅಮಿತ್‌ ಶಾ

ಪಿಟಿಐ
Published 19 ಡಿಸೆಂಬರ್ 2021, 14:23 IST
Last Updated 19 ಡಿಸೆಂಬರ್ 2021, 14:23 IST
ಅಮಿತ್‌ ಶಾ
ಅಮಿತ್‌ ಶಾ   

ಪುಣೆ: ಸಹಕಾರ ನಿರ್ವಹಣೆಯ ಕೋರ್ಸುಗಳಿಗಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ರಾಷ್ಟ್ರೀಯ ವಿಶ್ವವಿದ್ಯಾಲಯವೊಂದನ್ನು ಸ್ಥಾಪಿಸಲಿದೆ ಎಂದು ಗೃಹ ಹಾಗೂ ಸಹಕಾರ ಸಚಿವ ಅಮಿತ್‌ ಶಾ ಭಾನುವಾರ ಪ್ರಕಟಿಸಿದ್ದಾರೆ.

ಇಲ್ಲಿಯ ವೈಕುಂಠ ಮೆಹ್ತಾ ಸಹಕಾರಿ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆಯ (ವಾಮ್ನಿಕಾಮ್‌) ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರವು ಶೀಘ್ರದಲ್ಲಿ ಸಹಕಾರ ನೀತಿಯೊಂದನ್ನು ಜಾರಿಗೆ ತರಲಿದೆ ಎಂದು ಇದೇ ವೇಳೆ ಅವರು ಹೇಳಿದರು.

‘ಈ ಸಂಸ್ಥೆಗಳಲ್ಲಿ ಪದವಿ ಪೂರೈಸಿ ಹೊರಗೆ ಕಾಲಿಡುವ ವಿದ್ಯಾರ್ಥಿಗಳಿಗೆ ಸಹಕಾರಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಸಹಕಾರ ನಿರ್ವಹಣೆ ಕೋರ್ಸುಗಳಿಗಾಗಿ ಆರಂಭಿಸುವ ಪ್ರತ್ಯೇಕ ವಿಶ್ವವಿದ್ಯಾಲಯಕ್ಕೆ ಹಲವು ರಾಜ್ಯಗಳ ವಿವಿಗಳು ಸಂಯೋಜನೆ ಹೊಂದಲಿವೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.