ADVERTISEMENT

ಚಂದ್ರಾಣಿ ಮುರ್ಮು ಅತಿ ಕಿರಿಯ ಸಂಸದೆ!

ಒಡಿಶಾದ ಕ್ಯೊಂಜಾರ್ ಕ್ಷೇತ್ರದಿಂದ ಆಯ್ಕೆ; ಮೆಕ್ಯಾನಿಕಲ್‌ ಪದವೀಧರೆ

​ಪ್ರಜಾವಾಣಿ ವಾರ್ತೆ
Published 25 ಮೇ 2019, 16:43 IST
Last Updated 25 ಮೇ 2019, 16:43 IST
ಚಂದ್ರಾಣಿ ಮುರ್ಮು
ಚಂದ್ರಾಣಿ ಮುರ್ಮು   

ಭುವನೇಶ್ವರ: ಕೆಲ ತಿಂಗಳ ಹಿಂದಿನವರೆಗೂ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದರು. ಬ್ಯಾಂಕೊಂದರಲ್ಲಿ ಪ್ರೊಬೆಷನರಿ ಅಧಿಕಾರಿ ಅಥವಾ ಒಡಿಶಾ ಸರ್ಕಾರದಲ್ಲಿ ಉದ್ಯೋಗಿ ಆಗಬೇಕು ಎಂಬ ಗುರಿಯಷ್ಟೇ ಇತ್ತು.

ಮೆಕ್ಯಾನಿಕಲ್‌ ಎಂಜಿನಿಯರ್‌ ಪದವೀಧರೆಯಾಗಿದ್ದ ಆಕೆ, ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಲೋಕಸಭೆ ಚುನಾವಣೆ ಆಕೆಯ ಅದೃಷ್ಟ ಬದಲಿಸಿತು.

25 ವರ್ಷದ ‘ಚಂದ್ರಾಣಿ ಮುರ್ಮು’ ಈಗ ಲೋಕಸಭೆಯಲ್ಲಿ ಅತಿ ಕಿರಿಯ ಸಂಸದೆ. ಒಡಿಶಾದ ಪರಿಶಿಷ್ಟ ಪಂಗಡದ ಮೀಸಲು ಕ್ಷೇತ್ರ ಕ್ಯೊಂಜಾರ್‌ನಿಂದ ಬಿಜೆಡಿಯ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಎರಡು ಬಾರಿಯ ಸಂಸದ, ಬಿಜೆಪಿಯ ಅನಂತ ನಾಯಕ್‌ ವಿರುದ್ಧ 66,203 ಮತಗಳ ಅಂತರದಿಂದ ಗೆದ್ದಿದ್ದಾರೆ.

ADVERTISEMENT

ಶೇ 33ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ನೀಡಬೇಕು ಎಂದುಕೊಂಡಿದ್ದ ಪ್ರಾದೇಶಿಕ ಪಕ್ಷವಾದ ಬಿಜೆಡಿಯು, ಸಾರ್ವಜನಿಕ ಜೀವನ ಪ್ರವೇಶಿಸಲು ಬಯಸುವ, ವಿದ್ಯಾವಂತ ಅಭ್ಯರ್ಥಿಯ ಹುಡುಕಾಟದಲ್ಲಿತ್ತು. ಈ ಅವಕಾಶವನ್ನು ಮುರ್ಮು ಬಳಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.