ADVERTISEMENT

ಕಲ್ಲಿದ್ದಲು ಹಗರಣ: ವಿಚಾರಣೆಗೆ ಇಬ್ಬರು ನ್ಯಾಯಾಧೀಶರ ನೇಮಕ

ಪಿಟಿಐ
Published 5 ಏಪ್ರಿಲ್ 2021, 21:41 IST
Last Updated 5 ಏಪ್ರಿಲ್ 2021, 21:41 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌    

ನವದೆಹಲಿ: ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಇಬ್ಬರು ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೇಮಿಸಿದೆ.

2014ರಿಂದ ಬಾಕಿ ಉಳಿದಿರುವ ಈ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಧೀಶರಾದ ಅರುಣ್‌ ಭಾರದ್ವಾಜ್‌ ಮತ್ತು ಸಂಜಯ್‌ ಬನ್ಸಾಲ್‌ ಅವರನ್ನು ನೇಮಿಸಲಾಗಿದೆ.

ಈ ಮೊದಲು ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್ ಅವರು ವಿಚಾರಣೆ ನಡೆಸುತ್ತಿದ್ದರು. ವಿಶೇಷ ನ್ಯಾಯಾಧೀಶರ ಹುದ್ದೆಗೆ ನೇಮಿಸಲು ಅರ್ಹ ನ್ಯಾಯಾಧೀಶರ ಹೆಸರುಗಳನ್ನು ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್‌ ಮಾರ್ಚ್‌ 15ರಂದು ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಸೂಚಿಸಿತ್ತು.

ADVERTISEMENT

ಈ ಸೂಚನೆ ಅನ್ವಯ ದೆಹಲಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರು ಶಿಫಾರಸು ಮಾಡಿದ್ದ ಐವರು ನ್ಯಾಯಾಧೀಶರ ಹೆಸರುಗಳನ್ನು ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠ ಪರಿಶೀಲಿಸಿ, ಒಬ್ಬ ವಿಶೇಷ ನ್ಯಾಯಾಧೀಶರ ಬದಲು ಇಬ್ಬರನ್ನು ನೇಮಿಸುವ ನಿರ್ಧಾರ ಕೈಗೊಂಡಿದೆ.

ಹೀಗಾಗಿ, ಎರಡು ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ 41 ಪ್ರಕರಣಗಳ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.