ADVERTISEMENT

ಶ್ರೀನಗರ ಸೆಕ್ಟರ್‌ ಸಿಆರ್‌ಪಿಎಫ್‌ಗೆ ಮೊದಲ ಮಹಿಳಾ ಐಜಿ: ಐಪಿಎಸ್ ಚಾರು ಸಿನ್ಹಾ

ಉಗ್ರ_ನಿಗ್ರಹ ಕಾರ್ಯಾಚರಣೆ

ಏಜೆನ್ಸೀಸ್
Published 1 ಸೆಪ್ಟೆಂಬರ್ 2020, 6:37 IST
Last Updated 1 ಸೆಪ್ಟೆಂಬರ್ 2020, 6:37 IST
ಶ್ರೀನಗರದಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಸಿಆರ್‌ಪಿಎಫ್‌ ಸಿಬ್ಬಂದಿ–ಸಾಂದರ್ಭಿಕ ಚಿತ್ರ
ಶ್ರೀನಗರದಲ್ಲಿ ಭದ್ರತೆಗೆ ನಿಯೋಜನೆಯಾಗಿರುವ ಸಿಆರ್‌ಪಿಎಫ್‌ ಸಿಬ್ಬಂದಿ–ಸಾಂದರ್ಭಿಕ ಚಿತ್ರ   
""

ನವದೆಹಲಿ: ಶ್ರೀನಗರ ಸೆಕ್ಟರ್‌ನ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ (ಸಿಆರ್‌ಪಿಎಫ್‌) ಇದೇ ಮೊದಲ ಬಾರಿಗೆ ಮಹಿಳಾ ಐಪಿಎಸ್‌ ಅಧಿಕಾರಿಯೊಬ್ಬರು ಇನ್‌ಸ್ಪೆಕ್ಟರ್ ಜನರಲ್‌ (ಐಜಿ) ಆಗಿ ನೇಮಕಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಉಗ್ರ ಪೀಡಿತ ಪ್ರದೇಶಗಳಲ್ಲಿ ಶ್ರೀನಗರ ಸಹ ಸೇರಿದೆ.

ತೆಲಂಗಾಣ ಕೇಡರ್‌ನ 1996ನೇ ಬ್ಯಾಚ್‌ ಐಪಿಎಸ್‌ ಅಧಿಕಾರಿ ಚಾರು ಸಿನ್ಹಾ ಅವರು ಶ್ರೀನಗರ ಸೆಕ್ಟರ್‌ ಸಿಆರ್‌ಪಿಎಫ್‌ನ ಐಜಿ ಆಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಅವರು ನಕ್ಸಲ್‌ ಪೀಡಿತ ಬಿಹಾರ ಸೆಕ್ಟರ್‌ನ ಸಿಆರ್‌ಪಿಎಫ್‌ ಐಜಿ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.

ಚಾರು ಸಿನ್ಹಾ ಅವರ ನೇತೃತ್ವದಲ್ಲಿ ಹಲವು ನಕ್ಸಲ್‌ ನಿಗ್ರಹ ಕಾರ್ಯಾಚರಣೆಗಳು ನಡೆದಿವೆ. ಅನಂತರ ಅವರನ್ನು ಜಮ್ಮು ಸೆಕ್ಟರ್‌ಗೆ ವರ್ಗಾವಣೆ ಮಾಡಲಾಗಿತ್ತು.

ADVERTISEMENT
ಐಪಿಎಸ್‌ ಅಧಿಕಾರಿ ಚಾರು ಸಿನ್ಹಾ

ಪ್ರಸ್ತುತ ಸಿಆರ್‌ಪಿಎಫ್‌ನ ಡಿಜಿ ಆಗಿರುವ ಎಪಿ ಮಹೇಶ್ವರಿ ಅವರು 2005ರಲ್ಲಿ ಶ್ರೀನಗರ ಸೆಕ್ಟರ್‌ನ ಐಜಿ ಆಗಿ ನೇತೃತ್ವ ವಹಿಸಿದ್ದರು. 2005ರಿಂದ ಶ್ರೀನಗರ ಸೆಕ್ಟರ್‌ ಕಾರ್ಯಾಚರಣೆ ಆರಂಭವಾಗಿದ್ದು, ಅಂದಿನಿಂದ ಐಜಿ ದರ್ಜೆಯ ಮಹಿಳಾ ಅಧಿಕಾರಿಗಳು ಕಾರ್ಯಾಚರಣೆ ಮುನ್ನಡೆಸಿರಲಿಲ್ಲ.

ಸಿಆರ್‌ಪಿಎಫ್‌ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನೆಯೊಂದಿಗೆ ಉಗ್ರ ನಿಗ್ರಹ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರದ ಬಡಗಾಮ್‌, ಗಾಂದರ್‌ಬಲ್ ಮತ್ತು ಶ್ರೀನಗರ ಜಿಲ್ಲೆಗಳಲ್ಲಿ ಹಾಗೂ ಲಡಾಕ್‌ ಕೇಂದ್ರಾಡಳಿ ಪ್ರದೇಶದ ವರೆಗೂ ಸಿಆರ್‌ಪಿಎಫ್‌ನ ಶ್ರೀನಗರ ಸೆಕ್ಟರ್‌ ಸಹರದ್ದಿಗೆ ಒಳಪಟ್ಟಿದೆ.

ಶ್ರೀನಗರ ಸೆಕ್ಟರ್‌ ಎರಡು ರೇಂಜಸ್‌, 22 ಎಕ್ಸಿಕ್ಯುಟಿವ್‌ ಯೂನಿಟ್‌ಗಳು ಹಾಗೂ 3 ಮಹಿಳಾ ಕಂಪನೀಸ್‌ ಒಳಗೊಂಡಿದೆ. ಇದರೊಂದಿಗೆ ಗ್ರೂಪ್‌ ಸೆಂಟರ್‌ ಶ್ರೀನಗರದ ಆಡಳಿತ ನಿಯಂತ್ರಣವನ್ನೂ ಹೊಂದಿರುವುದಾಗಿ ಸಿಆರ್‌ಪಿಎಫ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.