ADVERTISEMENT

ಚೆನ್ನೈನಲ್ಲಿ ಭಾರಿ ಮಳೆ: ವಿಮಾನ ಸೇವೆಯಲ್ಲಿ ವ್ಯತ್ಯಯ

ಪಿಟಿಐ
Published 31 ಆಗಸ್ಟ್ 2025, 8:27 IST
Last Updated 31 ಆಗಸ್ಟ್ 2025, 8:27 IST
   

ಚೆನ್ನೈ: ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಚೆನ್ನೈನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗಿದ್ದು, ಚೆನ್ನೈಗೆ ಬರಬೇಕಿದ್ದ ಕೆಲವು ವಿಮಾನಗಳನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಿಸಲಾಗಿದೆ. ಅಲ್ಲಿಂದ ಪ್ರಯಾಣಿಕರನ್ನು ಚೆನ್ನೈಗೆ ಕರೆದುಕೊಂಡು ಬರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಹವಾಮಾನ ಕೇಂದ್ರದ ಬುಲೆಟಿನ್ ಪ್ರಕಾರ, ಶನಿವಾರ ರಾತ್ರಿ 10 ರಿಂದ ಮಧ್ಯರಾತ್ರಿ 12 ರವರೆಗೆ ಚೆನ್ನೈನಲ್ಲಿ ಭಾರೀ ಮಳೆಯಾಗಿದ್ದು, ಉತ್ತರ ಚೆನ್ನೈನಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ತಿಳಿದುಬಂದಿದೆ.

ADVERTISEMENT

‘ಆಗಸ್ಟ್ 31 ರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಿರುವುದು ದಾಖಲಾಗಿದೆ. ಮನಾಲಿ, ನ್ಯೂ ಮನಾಲಿ ಟೌನ್ ಮತ್ತು ವಿಮ್ಕೊ ನಗರಗಳಲ್ಲಿ ಕ್ರಮವಾಗಿ 270ಮಿ ಮೀ, 260 ಮಿಮೀ ಮತ್ತು 230 ಮಿಮೀ ಮಳೆಯಾಗಿದೆ’ ಎಂದು ಅದು ತಿಳಿಸಿದೆ.

‘ಮನಾಲಿ ಪ್ರದೇಶದ ಸುತ್ತಮುತ್ತ ಮೇಘಸ್ಟೋಟ ಸಂಭವಿಸಿದ್ದು, ರಾತ್ರಿ 10-11ರ ಅವಧಿಯಲ್ಲಿ 106.2 ಮಿಮೀ ಮಳೆ ಮತ್ತು ರಾತ್ರಿ 11 ರಿಂದ ಮಧ್ಯರಾತ್ರಿ 12 ರವರೆಗೆ 126.6 ಮಿಮೀ ಮಳೆಯಾಗಿದೆ’ ಎಂದು ಹೇಳಿದೆ.

ಭಾನುವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದಾಗಿ ಬೆಂಗಳೂರು, ದೆಹಲಿ, ಫ್ರಾನ್ಸ್ ಮತ್ತು ಮಂಗಳೂರಿನಿಂದ ಚೆನ್ನೈಗೆ ಬರಬೇಕಿದ್ದ ವಿಮಾನಗಳನ್ನು ಬೆಂಗಳೂರಿನ ಕಡೆ ತಿರುಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.