ADVERTISEMENT

ಬುರ್ಕಾಪಾಲ್‌ ನಕ್ಸಲ್ ದಾಳಿ: ಖುಲಾಸೆಗೊಂಡರೂ ಸೆರೆವಾಸ ಮುಂದುವರಿಕೆ

‘ಘೋರ ಅನ್ಯಾಯ’: ಮಾನವ ಹಕ್ಕು ಕಾರ್ಯಕರ್ತರ ಆರೋಪ

ಪಿಟಿಐ
Published 19 ಜುಲೈ 2022, 4:57 IST
Last Updated 19 ಜುಲೈ 2022, 4:57 IST
   

ಛತ್ತಿಸಗಡ:2017ರ ಬುರ್ಕಾಪಾಲ್ ನಕ್ಸಲ್‌ ದಾಳಿ ಪ್ರಕರಣದಲ್ಲಿ ಛತ್ತೀಸಗಡದ ದಾಂತೇವಾಡ ನ್ಯಾಯಾಲಯದಿಂದ ಇತ್ತೀಚೆಗೆ ಖುಲಾಸೆಗೊಂಡ 121 ಆದಿವಾಸಿಗಳ ಪೈಕಿ ಎಂಟು ಜನರು ಇತರೆ ಪ್ರಕರಣಗಳಲ್ಲಿ ಆರೋಪಿಗಳಾಗಿರುವುದರಿಂದ ಇನ್ನೂ ಜೈಲಿನಲ್ಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಬಸ್ತಾರ್ ಪ್ರದೇಶದ ಆದಿವಾಸಿಗಳಿಗೆಬುರ್ಕಾಪಾಲ್ ಪ್ರಕರಣ ‘ಘೋರ ಅನ್ಯಾಯ’ ಕ್ಕೆ ಉದಾಹರಣೆಯಾಗಿದೆ ಎಂದು ಮಾನವ ಹಕ್ಕುಗಳ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ಸುಕ್ಮಾ ಜಿಲ್ಲೆಯ ಬುರ್ಕಾಪಾಲ್ ಹಳ್ಳಿಯಲ್ಲಿ ನಕ್ಸಲರು ನಡೆಸಿದ ದಾಳಿಯಲ್ಲಿ 25 ಕೇಂದ್ರಿಯ ಮೀಸಲು ಪಡೆ (ಸಿಆರ್‌ಎಫ್‌)ಯ 25 ಸಿಬ್ಬಂದಿ ಹತ್ಯೆಗೀಡಾಗಿದ್ದರು.

ADVERTISEMENT

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯದ ವಿಶೇಷ ನ್ಯಾಯಾಧೀಶ ದೀಪಕ್‌ ಕುಮಾರ್‌ ದೇಶ್ಲೈ ಅವರು ಶುಕ್ರವಾರ 121 ಆರೋಪಿಗಳನ್ನು ಖುಲಾಸೆಗೊಳಿಸಿ, ಅಪರಾಧದಲ್ಲಿ ಅವರ ಪಾಲ್ಗೊಳ್ಳುವಿಕೆ ಮತ್ತು ನಕ್ಸಲ್‌ರೊಂದಿಗೆ ಸಂಪರ್ಕ ಇರುವುದನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದೆ ಎಂದು ಹೇಳಿದರು.

‘ನ್ಯಾಯಾಲಯದ ಆದೇಶದಂತೆಜಗದಲ್‌ಪುರ ಕೇಂದ್ರ ಕಾರಾಗೃಹದಿಂದ 110 ಮಂದಿ ಮತ್ತು ದಾಂತೇವಾಡ ಜಿಲ್ಲಾ ಕಾರಾಗೃಹದಿಂದ ಮೂವರು ಶನಿವಾರ ಬಿಡುಗಡೆಗೊಂಡಿದ್ದಾರೆ. ಇತರೆ ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಎಂಟು ಮಂದಿಯನ್ನು ಬಿಡುಗಡೆ ಮಾಡಿಲ್ಲ’ ಎಂದುಬಸ್ತಾರ್‌ ಪ್ರದೇಶದ ಐಜಿಪಿ ಪಿ.ಸುಂದರ್ ರಾಜ್ ತಿಳಿಸಿದ್ದಾರೆ.

ತೀರ್ಪಿನ ದಾಖಲೆ ಪರಿಶೀಲಿಸಿದ ನಂತರ ಪ್ರಕರಣದ ಮುಂದಿನ ಕ್ರಮ ನಿರ್ಧರಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

’ಕುಟುಂಬದಲ್ಲಿ ತಾವೊಬ್ಬರೆ ದುಡಿಯುತ್ತಿದ್ದ ಕಾರಣ ನಮ್ಮನ್ನು ನೆಚ್ಚಿಕೊಂಡಿದ್ದ ಕುಟುಂಬಗಳು ಬೀದಿಗೆ ಬಂದಿವೆ’ ಎಂದುಜೈಲಿನಿಂದ ಹೊರ ಬಂದ113 ಆದಿವಾಸಿಗಳಲ್ಲಿ ಕೆಲವರು ಆರೋಪಿಸಿದರು.

’ಮಾಡದ ಅಪರಾಧಕ್ಕೆ ಐದು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಬಂಧನಕ್ಕೆ ಕೆಲ ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದೆ. ಆಗಿನಿಂದ ನನ್ನ ಪತ್ನಿಯನ್ನು ನೋಡಿಲ್ಲ. ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ನನ್ನ ಚಿಕ್ಕಪ್ಪದೋಡಿ ಮಂಗ್ಳು (42) ಜೈಲಿನಲ್ಲೇ ಮೃತಪಟ್ಟರು. ಅವರಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡುವಂತೆ ಕೇಳಿದರೂ ಜೈಲು ಅಧಿಕಾರಿಗಳು ಕೊಡಲಿಲ್ಲ’ಎಂದುಜಾಗರಗುಂದ ಗ್ರಾಮದ ಹೇಮಲ ಆಯ್ತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.