ADVERTISEMENT

ಛತ್ತೀಸಗಢ: ಕಚ್ಚಾ ಬಾಂಬ್‌ ಸ್ಫೋಟದಿಂದ 11 ಯೋಧರಿಗೆ ಗಾಯ

ಪಿಟಿಐ
Published 26 ಜನವರಿ 2026, 15:36 IST
Last Updated 26 ಜನವರಿ 2026, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಾಯಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ಭದ್ರತಾ ಪಡೆಯ 11 ಮಂದಿ ನಕ್ಸಲರು ಹುದುಗಿಸಿಟ್ಟಿದ್ದ ಸುಧಾರಿತ ಕಚ್ಚಾಬಾಂಬ್‌ ಸ್ಫೋಟಿಸಿ ಗಾಯಗೊಂಡಿದ್ದಾರೆ.

ಕರ್ರೆಗುಟ್ಟ ಬೆಟ್ಟದಲ್ಲಿ ಭಾನುವಾರ ಶೋಧಕಾರ್ಯ ನಡೆಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ.

ಗಾಯಗೊಂಡವರಲ್ಲಿ ಜಿಲ್ಲಾ ಪೊಲೀಸ್‌ ಮೀಸಲು ಪಡೆ (ಡಿಆರ್‌ಜಿ) 10 ಮಂದಿ ಹಾಗೂ ಕೇಂದ್ರಿಯ ಪೊಲೀಸ್‌ ಪಡೆಯ ಒಬ್ಬರು ಯೋಧರು ಸೇರಿದ್ದಾರೆ. 

ADVERTISEMENT

ಮೂವರಿಗೆ ಕಾಲಿಗೆ ಗಾಯವಾಗಿದ್ದು, ಉಳಿದ ಮೂವರಿಗೆ ಕಣ್ಣಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ರಾಯಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.