ADVERTISEMENT

ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಸೇವಿಸು ಎಂದ ಪ್ರಿಯತಮೆಯ ಕುಟುಂಬ:ಮುಂದೇನಾಯ್ತು!

ಪಿಟಿಐ
Published 11 ಅಕ್ಟೋಬರ್ 2025, 12:45 IST
Last Updated 11 ಅಕ್ಟೋಬರ್ 2025, 12:45 IST
   

ಕೊರ್ಬಾ(ಛತ್ತೀಸಗಢ): ‘ಅವಳ ಮೇಲಿನ ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಸೇವಿಸಿ ತೋರಿಸು’ ಎಂದು ಪ್ರಿಯತಮೆಯ ಕುಟುಂಬ ಸವಾಲು ಎಸೆದಿದ್ದಕ್ಕೆ, ವಿಷ ಸೇವಿಸಿದ್ದ 20 ವರ್ಷದ ಯುವಕನು ಮೃತಪಟ್ಟ ಘಟನೆ ಛತ್ತೀಸಗಢದ ಕೊರ್ಬಾ ಎಂಬಲ್ಲಿ ಸಂಭವಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಕೃಷ್ಣ ಕುಮಾರ್ ಪಾಂಡೋ ಎನ್ನುವವರು ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದರು. ವಿಷಯ ತಿಳಿದ ಯುವತಿಯ ಪೋಷಕರು, ಸೆ.25ರಂದು ಪ್ರಿಯತಮನನ್ನು ಮನೆಗೆ ಆಹ್ವಾನಿಸಿದ್ದಾರೆ. ನಿನ್ನ ಪ್ರೀತಿ ನಿಜವಾಗಿದ್ದರೆ ವಿಷ ಕುಡಿದು ತೋರಿಸು ಎಂದು ಬಲವಂತ ಮಾಡಿದ್ದಾರೆ, ಪ್ರೀತಿಯನ್ನು ಸಾಬೀತು ಪಡಿಸಲು ಯುವಕ ವಿಷ ಸೇವಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಯುವಕ, ತನ್ನ ಮನೆಯವರಿಗೆ ಮಾಹಿತಿ ನೀಡಿದಾಗ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಿಸದೆ ಆತ ಮೃತಪಟ್ಟಿದ್ದಾನೆ.

ADVERTISEMENT

ಯುವಕನ ಕುಟುಂಬದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.