ADVERTISEMENT

ಛತ್ತೀಸಗಢ: 8 ನಕ್ಸಲರ ಹತ್ಯೆ, 16 ಮಂದಿ ಶರಣಾಗತಿ

ಪಿಟಿಐ
Published 11 ಸೆಪ್ಟೆಂಬರ್ 2025, 15:47 IST
Last Updated 11 ಸೆಪ್ಟೆಂಬರ್ 2025, 15:47 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ರಾಯಪುರ: ಛತ್ತೀಸಗಢದ ಗರಿಯಾಬಂದ್‌ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಗುರುವಾರ ನಡೆಸಿದ ಗುಂಡಿನ ದಾಳಿಯಲ್ಲಿ ಕನಿಷ್ಠ 8 ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ. 

‘ಮಣಿಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಗುಂಡಿನ ದಾಳಿ ನಡೆದಿದೆ. ಎಸ್‌ಟಿಎಫ್‌, ಸಿಆರ್‌ಪಿಎಫ್‌ನ ಕೋಬ್ರಾ, ರಾಜ್ಯ ಪೊಲೀಸ್‌ ಘಟಕ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಗುಂಡಿನ ದಾಳಿ ಮುಂದುವರಿದಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ 8 ಮಂದಿ ಹತ್ಯೆಯಾಗಿದ್ದಾರೆ’ ಎಂದು ರಾಯಪುರ ವಲಯದ ಐಜಿಪಿ ಅಮರೇಶ್‌ ಮಿಶ್ರಾ ತಿಳಿಸಿದ್ದಾರೆ. 

ನಾರಾಯಣಪುರ ಜಿಲ್ಲೆಯಲ್ಲಿ ಬುಧವಾರ ಸಂಜೆ 16 ನಕ್ಸಲರು ಭದ್ರತಾ ಪಡೆ ಎದುರು ಶರಣಾಗಿದ್ದಾರೆ. 

ADVERTISEMENT

ಜನತಾನ ಸರ್ಕಾರ್‌, ಚೇತನಾ ನಾಟ್ಯ ಮಂಡಿಲ್‌, ಪಂಚಾಯತ್‌ ಮಿಲಿಟಾ ಮತ್ತಿತರರ ಸಣ್ಣ ಘಟಕಗಳಿಗೆ ಸೇರಿದವರಾದ ಇವರಲ್ಲಿ ಹೆಚ್ಚಿನವರು ಪ್ರಮುಖ ನಕ್ಸಲ್‌ ಸಂಘಟನೆಗಳಿಗೆ ಪಡಿತರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದರು’ ಎಂದು ನಾರಾಯಣಪುರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಬಿನ್ಸನ್‌ ಗುರಿಯಾ ಹೇಳಿದ್ದಾರೆ. 

ಶರಣಾದ ನಕ್ಸಲರಿಗೆ ತಲಾ ₹50 ಸಾವಿರ ನಗದು ಪರಿಹಾರ ಹಾಗೂ ಸರ್ಕಾರದ ಪುನರ್ವಸತಿ ಯೋಜನೆಯಡಿ ಸೌಲಭ್ಯಗಳು ಲಭಿಸಿವೆ. 

2026ರ ಮಾರ್ಚ್‌ ಅಂತ್ಯದೊಳಗೆ ದೇಶವನ್ನು ನಕ್ಸಲ್‌ ಮುಕ್ತಗೊಳಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.