ADVERTISEMENT

ಛತ್ತೀಸ್‌ಗಢ: ನಕ್ಸಲ್‌ ಹತ್ಯೆ

ಪಿಟಿಐ
Published 10 ಸೆಪ್ಟೆಂಬರ್ 2025, 15:22 IST
Last Updated 10 ಸೆಪ್ಟೆಂಬರ್ 2025, 15:22 IST
<div class="paragraphs"><p>ಜಾರ್ಖಂಡ್‌ನಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ&nbsp;</p></div>

ಜಾರ್ಖಂಡ್‌ನಲ್ಲಿ ನಕ್ಸಲ್‌ ನಿಗ್ರಹ ಕಾರ್ಯಾಚರಣೆ 

   

ಕಡತ ಚಿತ್ರ

ಕಾಂಕೇರ್‌: ಛತ್ತೀಸಗಢದ ಕಾಂಕೇರ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲ್‌ ಒಬ್ಬ ಮೃತಪಟ್ಟಿದ್ದಾನೆ.

ADVERTISEMENT

ಮಾವೋವಾದಿಯ ಪಿಎಲ್‌ಜಿಎ (ಪೀಪಲ್ಸ್‌ ಲಿಬರೇಷನ್ ಗೆರಿಲ್ಲಾ ಆರ್ಮಿ) ಸದಸ್ಯನಾಗಿದ್ದ ಮಾಸ ಎಂಬಾತ ಮೃತ ನಕ್ಸಲ್‌. ಈತನ ಸುಳಿವು ನೀಡಿದವರಿಗೆ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭದ್ರತಾ ಪಡೆಯ ಜಂಟಿ ತಂಡವು ನಕ್ಸಲ್‌ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಎನ್‌ಕೌಂಟರ್‌ ನಡೆದಿದೆ. ಮಾಸನ ಮೃತದೇಹ ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.