ADVERTISEMENT

ಛತ್ತೀಸಗಢ: 15 ನಕ್ಸಲರು ಶರಣು

ಪಿಟಿಐ
Published 1 ಮಾರ್ಚ್ 2026, 16:03 IST
Last Updated 1 ಮಾರ್ಚ್ 2026, 16:03 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಹಾಸಮುಂದ್ (ಛತ್ತೀಸಗಢ): ಹಿರಿಯ ನಕ್ಸಲ್ ನಾಯಕ ವಿಕಾಸ್ ಸೇರಿ 15 ನಕ್ಸಲರು ಛತ್ತೀಸಗಢದ ಮಹಾಸಮುಂದ್ ಜಿಲ್ಲೆಯಲ್ಲಿ ಭಾನುವಾರ ಶರಣಾಗಿದ್ದಾರೆ. ಇವರ ಸುಳಿವು ನೀಡಿದರೆ ಒಟ್ಟು ₹73 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಈ ಶರಣಾಗತಿಯೊಂದಿಗೆ ಒಡಿಶಾದೊಂದಿಗೆ ಗಡಿ ಹಂಚಿಕೊಂಡಿರುವ ರಾಯ್‌ಪುರ–ಸಂಬಲ್‌ಪುರ ಪ್ರದೇಶದಲ್ಲಿ ನಕ್ಸಲ್ ಚಳವಳಿಯನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಶರಣಾದವರಲ್ಲಿ ಒಂಬತ್ತು ಮಹಿಳೆಯರು ಇದ್ದು, ಎಲ್ಲರೂ ಛತ್ತೀಸಗಢ–ಒಡಿಶಾ ಗಡಿಯಲ್ಲಿ ಸಕ್ರಿಯವಾಗಿದ್ದ ಸಿಪಿಐ(ಮಾವೋವಾದಿ) ಪಕ್ಷದ ಬಲಾಂಗಿರ್–ಬರ್‌ಗಢ–ಮಹಾಸಮುಂದ್ (ಬಿಬಿಎಂ) ವಲಯದವರು ಎಂದು ಅವರು ಹೇಳಿದ್ದಾರೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.