
ಬಿಜಾಪುರ: ಭೂಗತರಾಗಿದ್ದವರ ಸುಳಿವು ನೀಡಿದವರಿಗಾಗಿ ₹1.19 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 32 ಮಂದಿ ಸೇರಿದಂತೆ ಒಟ್ಟು 41 ನಕ್ಸಲರು ಬುಧವಾರ ಶರಣಾಗಿದ್ದಾರೆ.
ಶರಣಾಗತಿ ಮತ್ತು ಪುನರ್ವಸತಿಗೆ ಸಂಬಂಧಿಸಿದಂತೆ ಸರ್ಕಾರವು ಘೋಷಿಸಿರುವ ಹೊಸ ನೀತಿಯಡಿ 12 ಮಹಿಳೆಯರು ಸೇರಿದಂತೆ ನಕ್ಸಲ್ ಕಾರ್ಯಕರ್ತರು ಜಿಲ್ಲೆಯಲ್ಲಿ ಶರಣಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ಯಾದವ್ ತಿಳಿಸಿದ್ದಾರೆ.
ಪಂಡ್ರು ಹಪ್ಕಾ ಅಲಿಯಾಸ್ ಮೋಹನ್ (37), ಬಂಡಿ ಹಪ್ಕಾ (35), ಲಕ್ಕು ಕೊರ್ಸಾ (37), ಬದ್ರು ಪುನೆಮ್ (35), ಸುಖ್ರಾಮ್ ಹೆಮ್ಲಾ (27), ಮಂಜುಳಾ ಹೆಮ್ಲಾ (25), ಮಂಗಳಿ ಮಾಡ್ವಿ ಅಲಿಯಾಸ್ ಶಾಂತಿ (29), ಜೈರಾಮ್ ಕಡಿಯಾಮ್ (28), ಪಾಂಡೊ ಮಡ್ಕಾಂ ಅಲಿಯಾಸ್ ಚಾಂದನಿ ಶರಣಾದವರಲ್ಲಿ ಪ್ರಮುಖರು. ಇವರ ಪತ್ತೆಗಾಗಿ ತಲಾ ₹8 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಉಳಿದವರಲ್ಲಿ ಮೂವರ ಸುಳಿವಿಗೆ ತಲಾ ₹5ಲಕ್ಷ, 12 ನಕ್ಸಲರಿಗೆ ತಲಾ ₹2 ಲಕ್ಷ, ಎಂಟು ಕಾರ್ಯಕರ್ತರ ಸುಳಿವು ನೀಡಿದವರಿಗೆ ತಲಾ ₹1ಲಕ್ಷ ಬಹುಮಾನವನ್ನು ಪೊಲೀಸರು ಪ್ರಕಟಿಸಿದ್ದರು.
ಶರಣಾದ ಪ್ರತಿಯೊಬ್ಬರಿಗೂ ತಕ್ಷಣದ ಪರಿಹಾರವಾಗಿ ತಲಾ ₹50 ಸಾವಿರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.