ADVERTISEMENT

ಕೋಬ್ರಾ ಕಮಾಂಡೊ ರಾಕೇಶ್ವರ ಸಿಂಗ್ ಬಿಡುಗಡೆ

ಪಿಟಿಐ
Published 8 ಏಪ್ರಿಲ್ 2021, 22:13 IST
Last Updated 8 ಏಪ್ರಿಲ್ 2021, 22:13 IST
ಅಪಹೃತರಾಗಿದ್ದ ಕಮಾಂಡೊ ಚಿತ್ರವನ್ನು ಮೊಬೈಲ್‌ನಲ್ಲಿ ತೋರುತ್ತಿರುವ ಅವರ ಪತ್ನಿ
ಅಪಹೃತರಾಗಿದ್ದ ಕಮಾಂಡೊ ಚಿತ್ರವನ್ನು ಮೊಬೈಲ್‌ನಲ್ಲಿ ತೋರುತ್ತಿರುವ ಅವರ ಪತ್ನಿ   

ರಾಯಪುರ: ನಕ್ಸಲರು ಅಪಹರಿಸಿದ್ದ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಕೋಬ್ರಾ ಕಮಾಂಡೊ ರಾಕೇಶ್ವರ್ ಸಿಂಗ್ ಮಿನ್ಹಾಸ್‌ ಅವರನ್ನು ಗುರುವಾರ ಬಿಡುಗಡೆಗೊಳಿಸಲಾಗಿದೆ.

ಪೊಲೀಸರು ಈ ಮಾಹಿತಿಯನ್ನು ದೃಢಪಡಿಸಿದ್ದಾರೆ. ಮಿನ್ಹಾಸ್‌ ಅವರು 210ನೇ ಕೋಬ್ರಾ ತುಕಡಿಯ ಸದಸ್ಯರಾಗಿದ್ದಾರೆ. ‘ಕೋಬ್ರಾ’ ಎಂಬುದು ಸಿಆರ್‌ಪಿಎಫ್‌ನ ಮುಂಚೂಣಿ ಘಟಕವಾಗಿದೆ.

ಏಪ್ರಿಲ್‌ 3ರಂದು ರಾಯಪುರ ಮತ್ತು ಬಿಜಾಪುರ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮೇಲೆ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದರು. ಅದೇ ದಿನದಿಂದ ಮಿನ್ಹಾಸ್ ನಾಪತ್ತೆಯಾಗಿದ್ದರು. ಬಳಿಕ ಇವರನ್ನು ಅಪಹರಿಸಲಾಗಿದೆ ಎಂದು ನಕ್ಸಲರು ಹೇಳಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.