ADVERTISEMENT

ಮಹಾತ್ಮ ಗಾಂಧಿಗೆ ಅವಮಾನಿಸಿದ್ದ ಕಾಳಿಚರಣ್‌ ಮಹಾರಾಜ್‌ ಬಂಧನ

ಐಎಎನ್ಎಸ್
Published 30 ಡಿಸೆಂಬರ್ 2021, 11:38 IST
Last Updated 30 ಡಿಸೆಂಬರ್ 2021, 11:38 IST
ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌
ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌   

ಛತ್ತೀಸಗಡ: ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಧಾರ್ಮಿಕ ಮುಖಂಡ ಕಾಳಿಚರಣ್‌ ಮಹಾರಾಜ್‌ ಅವರನ್ನು ಛತ್ತೀಸಗಢ ಪೊಲೀಸರು ಬಂಧಿಸಿದ್ದಾರೆ.

ರಾಯ್‌ಪುರದಲ್ಲಿ ಡಿಸೆಂಬರ್‌ 26ರಂದು ಭಾನುವಾರ ನಡೆದ ಧರ್ಮ ಸಂಸತ್‌ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪದ ಬಳಸಲಾಗಿತ್ತು. ಗಾಂಧಿಯನ್ನು ಹತ್ಯೆ ಮಾಡಿದ್ದಕ್ಕೆ ನಾಥುರಾಮ್‌ ಗೋಡ್ಸೆಯನ್ನು ಶ್ಲಾಘಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಕಾಳಿಚರಣ್‌ ಮತ್ತು ಇತರ ಧಾರ್ಮಿಕ ಮುಖಂಡರ ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ರಾಯ್‌ಪುರದ ಮಾಜಿ ಮೇಯರ್‌ ಮತ್ತು ಕಾಂಗ್ರೆಸ್‌ ನಾಯಕ ಪ್ರಮೋದ್‌ ದುಬೆ ದೂರು ದಾಖಲಿಸಿದ್ದರು.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಳಿಚರಣ್, 'ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿಯಾಗಿದೆ. ನಮ್ಮ ಮುಂದೆಯೇ ಅವರು 1947 ರಲ್ಲಿ (ವಿಭಜನೆಯನ್ನು ಉಲ್ಲೇಖಿಸಿ) ದೇಶಗಳನ್ನು ವಶಪಡಿಸಿಕೊಂಡರು. ಅವರು ಮೊದಲು ಇರಾನ್, ಇರಾಕ್ ಮತ್ತು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡರು. ಬಳಿಕ ಅವರು ರಾಜಕೀಯದ ಮೂಲಕವೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನವನ್ನು ವಶಪಡಿಸಿಕೊಂಡರು. ಗಾಂಧಿಯನ್ನು ಕೊಂದ ನಾಥೂರಾಂ ಗೋಡ್ಸೆಗೆ ನಾನು ನಮಸ್ಕರಿಸುತ್ತೇನೆ' ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.