ದುರ್ಗ್: ಛತ್ತೀಸಗಡದ ದುರ್ಗ್ ಜಿಲ್ಲೆಯಲ್ಲಿ ಸಾಧುಗಳಂತೆ ಉಡುಗೆ ಧರಿಸಿದ್ದ ಮೂವರ ವ್ಯಕ್ತಿಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿ ಗುಂಪು ಹಲ್ಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಿಲಾಯಿ ಪೊಲೀಸ್ ಠಾಣೆಯ ವ್ಯಪ್ತಿಯ ಖರೊಡಾ ನಗರದಲ್ಲಿ ಗುಂಪು ಹಲ್ಲೆ ನಡೆಸಲಾಗಿದೆ. ಸಂತ್ರಸ್ತರು ರಾಜಸ್ಥಾನದವರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿ 30 ಮಂದಿಯನ್ನು ಪ್ರಶ್ನಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಸರ ಹಬ್ಬದಂದು ಮೂವರು ಸಾಧುಗಳಂತೆ ವೇಶ ಧರಿಸಿದ್ದವರು ಮಕ್ಕಳ ಜೊತೆ ಮಾತನಾಡುವುದನ್ನು ಕೆಲವು ಸ್ಥಳೀಯರು ಗಮನಿಸಿದ್ದಾರೆ. ಮಕ್ಕಳನ್ನು ಕದ್ದೊಯ್ಯಲು ಬಂದಿರುವ ಗುಂಪಿನವರೆಂದು ಶಂಕಿಸಿ ಮೂವರನ್ನು ಥಳಿಸಿದ್ದಾರೆ ಎಂದು ದುರ್ಗ್ ಜಿಲ್ಲೆಯ ಎಸ್‌ಪಿ ಅಭಿಷೇಕ್ ಪಲ್ಲವ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.