ಮುಂಬೈ: ಇಲ್ಲಿನ ಸೆಷೆನ್ಸ್ ನ್ಯಾಯಾಲಯವೊಂದು ದಾವೂದ್ ಇಬ್ರಾಹಿಂ ಗುಂಪಿನ ವ್ಯಕ್ತಿಯ ಹತ್ಯೆ ಪ್ರಕರಣದಿಂದ ಭೂಗತಪಾತಕಿ ಛೋಟಾ ರಾಜನ್‌ನನ್ನು ಖುಲಾಸೆಗೊಳಿಸಿದೆ.
ಡಿ.17ರಂದೇ ಖುಲಾಸೆಯ ಆದೇಶವನ್ನು ನ್ಯಾಯಾಲಯ ನೀಡಿತ್ತು. ಆದರೆ, ತೀರ್ಪಿನ ವಿವರಗಳು ಮಂಗಳವಾರ ಲಭ್ಯವಾಗಿವೆ.
ಭೂಗತಪಾತಕಿ ದಾವುದ್ ಇಬ್ರಾಹಿಂ ಗುಂಪಿನ ಸದಸ್ಯ ಎಂದು ಹೇಳಲಾಗಿದ್ದ ಅನಿಲ್ ಶರ್ಮಾನನ್ನು ಅಂಧೇರಿ ಉಪನಗರದಲ್ಲಿ ಸೆ. 2 1999ರಂದು ರಾಜನ್‌ನ ಸಹಚರರು ಹತ್ಯೆ ಮಾಡಿದ್ದರು. ದಾವೂದ್ ಹಾಗೂ ರಾಜನ್ ಗುಂಪಿನ ಮಧ್ಯ ಇದ್ದ ವೈರತ್ವವೇ ಈ ಹತ್ಯೆಗೆ ಮುಖ್ಯ ಕಾರಣ ಎಂದು ವಾದಿಸಲಾಗಿತ್ತು.
ಆದರೆ, ರಾಜನ್ ಹತ್ಯೆ ಮಾಡಿದ್ದಾನೆ ಎಂಬ ಸಾಕ್ಷ್ಯಗಳನ್ನು ಒದಗಿಸಲಾಗಿಲ್ಲ. ಆದ್ದರಿಂದ ರಾಜನ್‌ನನ್ನ ಈ ಪ್ರಕರಣದಿಂದ ಖುಲಾಸೆ ಮಾಡುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.