ನವದೆಹಲಿ: ಸಂಕಷ್ಟದಲ್ಲಿರುವ ಮಕ್ಕಳ ರಕ್ಷಣೆಗೆ ತೆರಳುವ ಸಂಸ್ಥೆಯ ಸಿಬ್ಬಂದಿ ಆಯ್ದ ನಗರಗಳಲ್ಲಿ ಉಬರ್ ಕ್ಯಾಬ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅನುಕೂಲ ಕಲ್ಪಿಸುವ ಸಂಬಂಧ ‘ಚೈಲ್ಡ್‌ಲೈನ್ ಇಂಡಿಯಾ ಫೌಂಡೇಷನ್’ (ಸಿಐಎಫ್) ಹಾಗೂ ಉಬರ್ ಮಾಡಿಕೊಂಡಿವೆ.
ಸಿಐಎಫ್, ಮಕ್ಕಳ ಸಹಾಯವಾಣಿ 1098 ನಿರ್ವಹಿಸುವ ನೋಡಲ್ ಸಂಸ್ಥೆಯಾಗಿದೆ.
‘ಬೆಂಗಳೂರು, ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ 83 ನಗರಗಳಲ್ಲಿ ಉಬರ್ ಕ್ಯಾಬ್‌ಗಳು ಈ ಸೇವೆಯನ್ನು ಒದಗಿಸಲಿವೆ. ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ₹ 63 ಲಕ್ಷಕ್ಕೂ ಅಧಿಕ ಮೌಲ್ಯದ ಪ್ರಯಾಣ ಸೌಲಭ್ಯ ಸಂಸ್ಥೆಯ ಸಿಬ್ಬಂದಿಗೆ ಸಿಗಲಿದೆ’ ಎಂದು ಸಿಐಎಫ್‌ನ ಕಾರ್ಯಕಾರಿ ನಿರ್ದೇಶಕ ಅಂಜಯ್ಯ ಪಂಡಿರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.