ADVERTISEMENT

ಭಾರಿ ಪ್ರವಾಹ; ಚೀನಾದಲ್ಲಿ ಲಕ್ಷ ಜನರ ಸ್ಥಳಾಂತರ

1200 ವರ್ಷಗಳಷ್ಟು ಹಳೆಯದಾದ ಬುದ್ಧನ ಮೂರ್ತಿ ರಕ್ಷಣೆ

ರಾಯಿಟರ್ಸ್
Published 19 ಆಗಸ್ಟ್ 2020, 6:42 IST
Last Updated 19 ಆಗಸ್ಟ್ 2020, 6:42 IST
ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಪ್ರವಾಹದಿಂದ ಅಪಾಯಕ್ಕೆ ಸಿಲುಕಿರುವ ಲೇಶಾನ್‌ನ ಬೃಹತ್ ಬುದ್ಧನ ಮೂರ್ತಿ
ಚೀನಾದ ನೈರುತ್ಯ ಸಿಚುವಾನ್ ಪ್ರಾಂತ್ಯದಲ್ಲಿ ಪ್ರವಾಹದಿಂದ ಅಪಾಯಕ್ಕೆ ಸಿಲುಕಿರುವ ಲೇಶಾನ್‌ನ ಬೃಹತ್ ಬುದ್ಧನ ಮೂರ್ತಿ   

ಶಾಂಘೈ: ನೈರುತ್ಯ ಸಿಚುವಾನ್‌ ಪ್ರಾಂತ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚೀನಾದ ಯಾಂಗ್ಟೆಝ್‌ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ಪರಿಣಾಮ, ನದಿ ದಂಡೆಯಲ್ಲಿ ಸಿಲುಕಿದ್ದ ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ಇದೇ ವೇಳೆ ಪ್ರವಾಹದಿಂದ ಅಪಾಯಕ್ಕೆ ಸಿಲುಕಿದ್ದ1200 ವರ್ಷಗಳಷ್ಟು ಹಳೆಯದಾದ ವಿಶ್ವ ಪಾರಂಪರಿಕ ತಾಣ 71 ಮೀಟರ್ ಎತ್ತರದ ಬೃಹತ್‌ ಬುದ್ಧನ ಮೂರ್ತಿಯನ್ನು ರಕ್ಷಿಸಲು ಪೊಲೀಸರು, ಸರ್ಕಾರ ಮತ್ತು ಸ್ವಯಂ ಸೇವಕರು ಮುಂದಾಗಿದ್ದಾರೆ. ಕೆಸರು ಮಿಶ್ರಿತ ನೀರಿನಿಂದ ಬುದ್ಧನ ಮೂರ್ತಿಯನ್ನು ರಕ್ಷಿಸಲು ಸ್ವಯಂ ಸೇವಕರು ಮರಳು ಚೀಲಗಳ ರಾಶಿ ಹಾಕಿದ್ದಾರೆ.

1949ರ ನಂತರ ಇದೇ ಮೊದಲ ಬಾರಿಗೆ ಈ ಪಾರಂಪರಿಕ ತಾಣ ಅಪಾಯದಲ್ಲಿ ಸಿಲುಕಿದೆ. ‌ಭಾರಿ ಮಳೆಯಿಂದಾಗಿ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸರ್ಕಾರ ಈ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.