ನವದೆಹಲಿ: ಚೀನಾ ದೇಶವು ಕೆಲವು ದಶಕಗಳಿಂದ ಅರಬ್ಬೀ ಸಮುದ್ರದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚು ಮಾಡಿದೆ. ಪೀಪಲ್ಸ್ ಲಿಬರೇಷನ್ ಆರ್ಮಿಯ 6–8 ನೌಕೆಗಳು ಯಾವುದೇ ಸಮಯದಲ್ಲಿಯೂ ಅಲ್ಲಿ ಇರುತ್ತವೆ. ಆದರೆ ಯಾರು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬ ಮಾಹಿತಿ ಭಾರತಕ್ಕೆ ತಿಳಿದಿರುತ್ತದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಅವರು ಶುಕ್ರವಾರ ತಿಳಿಸಿದರು.
‘ಭಾರತ 2024: ಯುದ್ಧದಲ್ಲಿ ಆತ್ಮ ನಿರ್ಭರತೆ’ ವಿಷಯದ ಬಗ್ಗೆ ಮಾತನಾಡಿದ ಅವರು, ಚೀನಾ ಎಲ್ಲಿಗೆ ಪ್ರವೇಶಿಸಬಾರದು ಎಂದು ಬಯಸುತ್ತೇವೆಯೋ ಅಲ್ಲಿಗೆ ಕಾಲಿಡಲು ಭಾರತ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಒಳ್ಳೆಯ ವಿಚಾರ ಎಂದರೆ; ಯಾರು, ಎಲ್ಲಿ, ಏನು ಮಾಡುತ್ತಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಭಾರತದ ನೌಕಾಪಡೆಗೆ ಇರುತ್ತದೆ. ಬಾಹ್ಯಾಕಾಶ ಆಧಾರಿತ ಕಣ್ಗಾವಲು ಜತೆಗೆ ಮಾನವಸಹಿತ, ಮಾನವರಹಿತ ತಂತ್ರಜ್ಞಾನದ ಮೂಲಕ ಹದ್ದಿನ ಕಣ್ಣಿಡಲಾಗುತ್ತದೆ. ಅಂತರರಾಷ್ಟ್ರೀಯ ಸಂಸ್ಥೆಗಳ ಮೂಲಕವೂ ಮಾಹಿತಿ ಲಭಿಸುತ್ತದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.