ADVERTISEMENT

ದೇಶದ ಮೇಲೆ ಚೀನಾ ಮಿಲಿಟರಿ ಸವಾರಿ ಅಬಾಧಿತ: ತೈವಾನ್‌ ರಕ್ಷಣಾ ಸಚಿವಾಲಯ

ಏಜೆನ್ಸೀಸ್
Published 1 ನವೆಂಬರ್ 2023, 13:48 IST
Last Updated 1 ನವೆಂಬರ್ 2023, 13:48 IST
ಚೀನಾ ಮಿಲಿಟರಿ ಪಡೆ (ಸಾಂದರ್ಭಿಕ ಚಿತ್ರ )
ಚೀನಾ ಮಿಲಿಟರಿ ಪಡೆ (ಸಾಂದರ್ಭಿಕ ಚಿತ್ರ )    

ತೈಪೆ (ತೈವಾನ್): ತನ್ನ ಸ್ವಯಂ ಆಡಳಿತಕ್ಕೆ ಒಳಪಟ್ಟ ದ್ವೀಪದ ಸಮೀಪಕ್ಕೆ 43 ಯುದ್ಧ ವಿಮಾನಗಳು ಹಾಗೂ ಏಳು ಹಡಗುಗಳನ್ನು ರವಾನಿಸುವ ಮೂಲಕ ತೈವಾನ್‌ ದೇಶದ ಮೇಲೆ ಮಿಲಿಟರಿ ಒತ್ತಡವನ್ನು ಚೀನಾ ಮುಂದುವರಿಸಿದೆ.

ತೈವಾನ್‌ ರಕ್ಷಣಾ ಸಚಿವಾಲಯವು ಬುಧವಾರ ಚೀನಾದ ಈ ನಡೆಯ ಬಗ್ಗೆ ಅಧಿಕೃತವಾಗಿ ಹೇಳಿಕೆ ನೀಡಿದೆ. ‘ತೈವಾನ್ ಜಲಸಂಧಿಯ ಮಧ್ಯದ ರೇಖೆಯನ್ನು ಯುದ್ಧ ವಿಮಾನಗಳು ದಾಟಿವೆ. ಇದು ಕಿರುಕುಳ ಹಾಗೂ ಬೆದರಿಕೆಯ ಭಾಗವಾಗಿದೆ’ ಎಂದು ಹೇಳಿದೆ. ಈ ಚಟುವಟಿಕೆಗಳ ಮೇಲೆ ತೈವಾನ್‌ ನಿಗಾವಹಿಸಿದೆ.

2022ರ ಆಗಸ್ಟ್‌ನಲ್ಲಿ ಅಮೆರಿಕದ ಸಂಸತ್ತಿನ ಸ್ಪೀಕರ್‌ ನ್ಯಾನ್ಸಿ ಪೆಲೋಸಿ ಅವರು ತೈವಾನ್‌ಗೆ ನೀಡಿದ್ದ ಭೇಟಿಯಿಂದಾಗಿ ಚೀನಾ ಕೆರಳಿತ್ತು. ಅಲ್ಲದೇ, ಅಮೆರಿಕದ ಜತೆಗಿನ ತನ್ನ ರಕ್ಷಣಾ ಸಂವಹನವನ್ನೂ ಸ್ಥಗಿತಗೊಳಿಸಿತ್ತು. ತೈವಾನ್ ದ್ವೀಪದ ಸುತ್ತಲೂ ಸಮರಾಭ್ಯಾಸ ನಡೆಸಿ ಆಕ್ರೋಶ ಹೊರಹಾಕಿತ್ತು. ಆ ಮೂಲಕ ಮಿಲಿಟರಿ ಬಲ ಬಳಸಿಕೊಂಡು ತೈವಾನ್ ಅನ್ನು ವಶಪಡಿಸಿಕೊಳ್ಳಲು ತಾನು ಸಿದ್ಧ ಎಂಬ ಸಂದೇಶ ರವಾನಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.