ADVERTISEMENT

ಗಡಿಯಲ್ಲಿ ಚಕಮಕಿ: ಚೀನಾ ಯೋಧರೂ ಮೃತಪಟ್ಟಿದ್ದಾರೆಂದ ಗ್ಲೋಬಲ್ ಟೈಮ್ಸ್ ಸಂಪಾದಕ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 9:47 IST
Last Updated 16 ಜೂನ್ 2020, 9:47 IST
ಗ್ಲೋಬಲ್ ಟೈಮ್ಸ್ (ಸಾಂದರ್ಭಿಕ ಚಿತ್ರ)
ಗ್ಲೋಬಲ್ ಟೈಮ್ಸ್ (ಸಾಂದರ್ಭಿಕ ಚಿತ್ರ)   

ಬೀಜಿಂಗ್: ಲಡಾಖ್‌ನ ಪೂರ್ವಭಾಗದ ಗಲ್ವಾನ್‌ ಕಣಿವೆಯಲ್ಲಿ ಸೋಮವಾರ ರಾತ್ರಿ ನಡೆದ ಸೇನಾ ಘರ್ಷಣೆಯಲ್ಲಿ ಚೀನಾದ ಯೋಧರೂ ಮೃತಪಟ್ಟಿದ್ದಾರೆ ಎಂದು ಅಲ್ಲಿನ ‘ಗ್ಲೋಬಲ್ ಟೈಮ್ಸ್’ ಪತ್ರಿಕೆಯ ಪ್ರಧಾನ ಸಂಪಾದಕ ಹು ಕ್ಸಿಜಿನ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನನಗೆ ತಿಳಿದ ಪ್ರಕಾರ ಗಲ್ವಾನ್‌ ಕಣಿವೆಯಲ್ಲಿ ನಡೆದ ಘರ್ಷಣೆಯಲ್ಲಿ ಚೀನಾ ಕಡೆಯಲ್ಲೂ ಸಾವು ಸಂಭವಿಸಿದೆ. ಅಹಂಕಾರ ತೋರಬೇಡಿ ಹಾಗೂ ಚೀನಾದ ಸಂಯಮವನ್ನು ದೌರ್ಬಲ್ಯವೆಂದು ಭಾವಿಸಬೇಡಿ ಎಂದು ಭಾರತಕ್ಕೆ ಹೇಳಲು ಬಯಸುತ್ತೇನೆ. ಭಾರತದೊಂದಿಗೆ ಘರ್ಷಣೆ ಚೀನಾಕ್ಕೆ ಬೇಕಿಲ್ಲ. ಆದರೆ, ನಾವು ಅದಕ್ಕೆ ಹೆದರುವುದೂ ಇಲ್ಲ’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಏತನ್ಮಧ್ಯೆ, ಮಧ್ಯೆ ಪರಿಸ್ಥಿತಿ ತಿಳಿಗೊಳಿಸಲು ಉಭಯ ದೇಶಗಳ ಮೇಜರ್ ಜನರಲ್ ಮಟ್ಟದ ಮಾತುಕತೆ ನಡೆಯುತ್ತಿದೆ.

ADVERTISEMENT

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.