ADVERTISEMENT

ಚಾಯ್‍ವಾಲಾ ಮೋದಿ ಚೌಕಿದಾರ್ ಆಗಿಬಿಟ್ಟರೇ?: ಮಾಯಾವತಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 10:06 IST
Last Updated 19 ಮಾರ್ಚ್ 2019, 10:06 IST
   

ನವದೆಹಲಿ: ಬಿಜೆಪಿಯ ಮೈ ಭೀ ಚೌಕೀದಾರ್ ಅಭಿಯಾನದ ಬಗ್ಗೆ ವ್ಯಂಗ್ಯವಾಡಿರುವ ಬಹುಜನ್ ಸಮಾಜ್ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಚಾಯ್‍ವಾಲಾ ಮೋದಿ ಚೌಕೀದಾರ್ ಆಗಿದ್ದು ಯಾವಾಗ ಎಂದು ಕೇಳಿದ್ದಾರೆ.

ಬಿಜೆಪಿ ಮೈ ಭೀ ಚೌಕೀದಾರ್ ಅಭಿಯಾನ ಆರಂಭ ಮಾಡಿದ ನಂತರ ಪ್ರಧಾನಿ ಮೋದಿ ಮತ್ತು ಇತರರು ಟ್ವಿಟರ್‌ನಲ್ಲಿ ತಮ್ಮ ಹೆಸರಿನ ಮುಂದೆ ಚೌಕೀದಾರ್ ಎಂದು ಸೇರಿಸುತ್ತಿದ್ದಾರೆ.ಕಳೆದ ಲೋಕಸಭಾ ಚುನಾವಣೆ ವೇಳೆ ಚಾಯ್‍ವಾಲಾ ಆಗಿದ್ದ ಮೋದಿ ಇದೀಗ ಚೌಕೀದಾರ್ ಆಗಿದ್ದಾರೆ.ಬಿಜೆಪಿ ಅಧಿಕಾರವಧಿಯಲ್ಲಿ ಏನೆಲ್ಲಾ ಬದಲಾವಣೆಗಳು! ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

ಮೋದಿ ಟೀ ಮಾರುತ್ತಿದ್ದರು ಎಂದು ಹೇಳಿ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಚಾರ ನಡೆಸಿತ್ತು. ಆ ಚುನಾವಣೆಯಲ್ಲಿ ಗೆದ್ದು ಮೋದಿ ಪ್ರಧಾನಿ ಗದ್ದುಗೆ ಏರಿದ್ದರು. 5 ವರ್ಷಗಳ ನಂತರ ಇದೀಗ ಬಿಜೆಪಿ ನಾನೂ ಚೌಕೀದಾರ್ ಎಂಬ ಅಭಿಯಾನವನ್ನು ಕೈಗೊಂಡಿದೆ.

ADVERTISEMENT

ಭ್ರಷ್ಟಾಚಾರ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಎಲ್ಲರೂ ಚೌಕೀದಾರ್ ಆಗಬೇಕು ಎಂದು ಕರೆ ನೀಡಿದ ಮೋದಿ, ಭಾನುವಾರ ಟ್ವಿಟರ್‌ನಲ್ಲಿಚೌಕೀದಾರ್ ನರೇಂದ್ರ ಮೋದಿ ಎಂದು ಹೆಸರು ಬದಲಿಸಿ ಮೈ ಭೀ ಚೌಕೀದಾರ್ ಅಭಿಯಾನ ಆರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.