
ಮುಂಬೈ:ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಕ್ರೈಸ್ತರು ಯಾವುದೇ ಕೊಡುಗೆ ನೀಡಿಲ್ಲ ಎಂದು ಉತ್ತರ ಮಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಹೇಳಿದ್ದಾರೆ.
ಅವರನ್ನು ‘ವಿದೇಶಿಯರು’ ಎಂದೂ ಅವರು ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟದಲ್ಲಿ ಹಿಂದುಗಳು ಮತ್ತು ಮುಸ್ಲಿಮರು ಮಾತ್ರ ಪಾತ್ರವಹಿಸಿದ್ದಾರೆ ಎಂದು ಗೋಪಾಲ್ ಶೆಟ್ಟಿ ಹೇಳಿದ್ದಾರೆ.
ಬ್ರಿಟಿಷರು ಕ್ರೈಸ್ತರು. ಹೀಗಾಗಿ, ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಹಿಂದೂಗಳು ಮತ್ತು ಮುಸ್ಲಿಮರ ಹೊರತಾಗಿ ಭಾರತ ಮುಕ್ತವಾಗಲಿಲ್ಲ. ನಮ್ಮ ಸ್ವಾತಂತ್ರ್ಯಕ್ಕಾಗಿ ಒಂದಾಗಿ ನಾವು ಹೋರಾಡಿದ್ದೇವೆ ಎಂದು ಹೇಳಿರುವುದು ವಿಡಿಯೊದಲ್ಲಿದೆ.
ಭಾನುವಾರ ಇಲ್ಲಿನ ಮಲಾದ್‌ನ ಮಾಲ್ವಾನಿಯ ಶಿಯಾ ಖಬರಸ್ತಾನ್ ಸಮಿತಿಯಿಂದ ಆಯೋಜಿಸಿದ್ದ ಈದ್–ಮಿಲಾದ್ ಸಂದರ್ಭದಲ್ಲಿ ಗೋಪಾಲ್ ಶೆಟ್ಟಿ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.