ADVERTISEMENT

ಎರಡು ದಿನಗಳ ಪ್ರತಿಭಟನೆ ಬಳಿಕ ಸಹಜ ಸ್ಥಿತಿಗೆ ಮರಳಿದ ಚುರಾಚಾಂದಪುರ

ಪಿಟಿಐ
Published 7 ಫೆಬ್ರುವರಿ 2026, 20:29 IST
Last Updated 7 ಫೆಬ್ರುವರಿ 2026, 20:29 IST
.
.   

ಇಂಫಾಲ್/ ಚುರಾಚಾಂದಪುರ: ಎರಡು ದಿನಗಳ ಪ್ರತಿಭಟನೆ ಬಳಿಕ ಮಣಿಪುರದ ಚುರಾಚಾಂದಪುರ ಜಿಲ್ಲೆಯು ಶನಿವಾರ ಸಹಜ ಸ್ಥಿತಿಗೆ ಮರಳಿದೆ ಎಂದು ಪೊಲೀಸರು ತಿಳಿಸಿದರು.

ಮಣಿಪುರದಲ್ಲಿ ನೂತನವಾಗಿ ರಚನೆಯಾದ ಸರ್ಕಾರದಲ್ಲಿ ಕುಕಿ ಸಮುದಾಯದ ಮೂವರು ಬಿಜೆಪಿ ಶಾಸಕರು ಭಾಗಿಯಾಗಿದ್ದನ್ನು ಖಂಡಿಸಿ ಸಮುದಾಯವು ಚುರಾಚಾಂದಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ ಇಡೀ ನಗರವೇ ಸ್ತಬ್ಧವಾದಂತಾಗಿತ್ತು.

‘ಸದ್ಯ, ಚುರಾಚಾಂದಪುರ ನಗರದ ವಿವಿಧ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಯು ಮರು ಆರಂಭವಾಗಿದೆ. ಆದರೆ ತೊಯ್‌ಬಾಂಗ್‌ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಇನ್ನಷ್ಟೇ ‌ಮರು ಆರಂಭಗೊಳ್ಳಬೇಕಿದೆ ಎಂದರು.

ADVERTISEMENT

ಅಹಿತಕರ ಘಟನೆಗಳನ್ನು ತಡೆಯಲು ಹೆಚ್ಚುವರಿ ಭದ್ರತಾ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.