ADVERTISEMENT

ಸಿಐಡಿ ಅಧಿಕಾರಿ, ಪಿಡಿಪಿ ಕಾರ್ಯಕರ್ತನ ಹತ್ಯೆ

ಎರಡು ಪ್ರತ್ಯೇಕ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:48 IST
Last Updated 28 ಅಕ್ಟೋಬರ್ 2018, 19:48 IST

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ ಎರಡು ಪ್ರತ್ಯೇಕ ಘಟನೆಗಳಲ್ಲಿ ಸಿಐಡಿ ಅಧಿಕಾರಿ ಹಾಗೂ ಪಿಡಿಸಿ ಕಾರ್ಯಕರ್ತರೊಬ್ಬರನ್ನು ಉಗ್ರಗಾಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ದಕ್ಷಿಣ ಪುಲ್ವಾಮಾ ಜಿಲ್ಲೆಯಲ್ಲಿ ಸಿಐಡಿಯ ಸಬ್‌ ಇನ್‌ಸ್ಟೆಕ್ಟರ್‌ ಇಮ್ತಿಯಾಜ್‌ ಅಹ್ಮದ್‌ ಮಿರ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಶ್ರೀನಗರದ ಗುಂಗ್‌ಬುಗ್‌ ಪ್ರದೇಶದಲ್ಲಿ ಪಿಡಿಪಿ ಕಾರ್ಯಕರ್ತ ಮೊಹಮ್ಮದ್‌ ಅಮಿನ್‌ ದಾರ್‌ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ, ಅವರು ಆಸ್ಪತ್ರೆಗೆ ಸಾಗಿರುವ ಮಾರ್ಗ ಮಧ್ಯೆ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.