ADVERTISEMENT

ಅಂಗರಕ್ಷಕ ಸಾವು: ಸುವೇಂದು ಅಧಿಕಾರಿಗೆ ಸಿಐಡಿ ಸಮನ್ಸ್‌

ಪಿಟಿಐ
Published 5 ಸೆಪ್ಟೆಂಬರ್ 2021, 6:23 IST
Last Updated 5 ಸೆಪ್ಟೆಂಬರ್ 2021, 6:23 IST
ಸುವೇಂದು ಅಧಿಕಾರಿ
ಸುವೇಂದು ಅಧಿಕಾರಿ   

ಕೋಲ್ಕತ್ತ: ಅಂಗರಕ್ಷಕ ಸಾವಿಗೀಡಾದ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರಿಗೆ ಸಿಐಡಿ ಸಮನ್ಸ್‌ ನೀಡಿದೆ.

ಸಿಐಡಿ ಪ್ರಧಾನ ಕಚೇರಿಯಲ್ಲಿ ತನಿಖಾ ಅಧಿಕಾರಿಗಳ ಮುಂದೆ ಸೋಮವಾರ ಹಾಜರಾಗುವಂತೆ ಸುವೇಂದು ಅವರಿಗೆ ಸೂಚಿಸಲಾಗಿದೆ. ಸುವೇಂದು ಅವರ ಅಂಗರಕ್ಷಕರಾಗಿದ್ದ ಸುಭಬ್ರತಾ ಚಕ್ರವರ್ತಿ ಅವರ ಅಸಹಜ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಐಡಿ ವಿಶೇಷ ತಂಡವನ್ನು ರಚಿಸಿದೆ.

ಇತ್ತೀಚೆಗೆ ಚಕ್ರವರ್ತಿ ಅವರು, ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡಿದ್ದರು. ತಮ್ಮ ಪತಿಯ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಚಕ್ರವರ್ತಿ ಅವರ ಪತ್ನಿ ಕೊಂಟೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ADVERTISEMENT

ಸಿಐಡಿ ಇದುವರೆಗೆ 11 ಪೊಲೀಸರು ಸೇರಿದಂತೆ 15 ಮಂದಿಯ ವಿಚಾರಣೆ ನಡೆಸಿದೆ. ಪುರ್ಬಾ ಮೆದಿನಿಪುರದಲ್ಲಿರುವ ಸುವೇಂದು ಅಧಿಕಾರಿ ನಿವಾಸ ‘ಶಾಂತಿ ಕುಂಜ’ಗೂ ಸಿಐಡಿ ತಂಡ ಭೇಟಿ ನೀಡಿ ಪರಿಶೀಲಿಸಿದೆ.

ರಾಜ್ಯ ಶಸ್ತ್ರಾಸ್ತ್ರ ಪೊಲೀಸ್‌ ಪಡೆಯಲ್ಲಿದ್ದ ಚಕ್ರವರ್ತಿ ಅವರನ್ನು ಸುವೇಂದು ಅಧಿಕಾರಿ ಅವರ ಭದ್ರತೆಗೆ ನಿಯೋಜಿಸಲಾಗಿತ್ತು. ಸುವೇಂದು ಅವರು ಟಿಎಂಸಿ ಸಂಸದರಾಗಿದ್ದ ಅವಧಿಯಿಂದಲೂ ಭದ್ರತಾ ತಂಡದಲ್ಲಿ ಚಕ್ರವರ್ತಿ ಇದ್ದರು. 2015ರಲ್ಲಿ ಸುವೇಂದು ಸಚಿವರಾದ ಬಳಿಕವೂ ಮುಂದುವರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.