ADVERTISEMENT

ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ ರದ್ದು ಕೋರಿ ಸುಪ್ರೀಂಗೆ 6,000 ಮನವಿ

ಪಿಟಿಐ
Published 19 ಆಗಸ್ಟ್ 2022, 6:14 IST
Last Updated 19 ಆಗಸ್ಟ್ 2022, 6:14 IST
ಬಿಲ್ಕಿಸ್‌ ಬಾನು
ಬಿಲ್ಕಿಸ್‌ ಬಾನು   

ನವದೆಹಲಿ (ಪಿಟಿಐ): ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದ 11 ಅಪರಾಧಿಗಳ ಬಿಡುಗಡೆ ಕ್ರಮವನ್ನು ರದ್ದುಪಡಿಸಬೇಕು ಎಂದು ಮಹಿಳೆಯರು, ಸಾಮಾಜಿಕ ಕಾರ್ಯಕರ್ತರು ಸೇರಿ 6 ಸಾವಿರಕ್ಕೂ ಅಧಿಕ ನಾಗರಿಕರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.

ಅಪರಾಧಿಗಳ ಬಿಡುಗಡೆ ಕ್ರಮವು, ‘ವ್ಯವಸ್ಥೆಯ ಮೇಲೆ ವಿಶ್ವಾಸವಿಡಿ’, ‘ನ್ಯಾಯಕ್ಕಾಗಿ ಹೋರಾಡಿ’ ಎಂಬ ಮಾತು ನಂಬಿದ್ದ ಪ್ರತಿ ಅತ್ಯಾಚಾರ ಸಂತ್ರಸ್ಥೆಯರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಜಂಟಿ ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತರಾದ ಸಯೀದಾ ಹಮೀದ್‌, ಜಫರುಲ್ ಇಸ್ಲಾಂ ಖಾನ್, ರೂಪ್‌ ರೇಖಾ, ದೇವಕಿ ಜೈನ್‌, ಉಮಾ ಚಕ್ರವರ್ತಿ, ಸುಭಾಷಿಣಿ ಅಲಿ, ಕವಿತಾ ಕೃಷ್ಣನ್‌, ಮೈಮುನಾ ಮೊಲ್ಹಾ, ಹಸೀನಾ ಖಾನ್‌ ಮತ್ತಿತರರು ಹೇಳಿಕೆಗೆ ಸಹಿ ಹಾಕಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.