ಥಾಣೆ( ಮಹಾರಾಷ್ಟ್ರ) ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ₹1 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಾಗೂ ಸ್ವೀಕರಿಸಿದ ಆರೋಪದ ಮೇಲೆ ನಾಗರಿಕ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.
ಕಲ್ಯಾಣ್ ಡೊಂಬಿವಿಲಿ ಮುನ್ಸಿಪಲ್ ಕಾರ್ಪೊರೇಷನ್ (ಕೆಡಿಎಂಸಿ) ಭದ್ರತಾ ಅಧಿಕಾರಿಯೊಬ್ಬರು, ಭದ್ರತಾ ಸಿಬ್ಬಂದಿ ಹಾಗೂ ಅವರ ಸಹೋದ್ಯೋಗಿಯಿಂದ ನಿಗದಿತ ಪೋಸ್ಟಿಂಗ್ ನೀಡುವುದಕ್ಕಾಗಿ ಲಂಚ ಕೇಳಿದ ಆರೋಪದ ಮೇಲೆ ಥಾಣೆ ಘಟಕ ಎಸಿಬಿಗೆ ಸಿಕ್ಕಿಬಿದ್ದಿದ್ದಾನೆ.
ಆರೋಪಿಯು ದೂರುದಾರರಿಂದ ₹500 ಹಾಗೂ ಅದೇ ಮೊತ್ತವನ್ನು ನಾಗರಿಕ ಸಂಸ್ಥೆಗೆ ಭದ್ರತಾ ಸೇವೆಗಳನ್ನು ಒದಗಿಸುವ ಏಜೆನ್ಸಿಯಿಂದ ಪಡೆದುಕೊಂಡಿದ್ದಾನೆ. ದೂರುದಾರರಿಂದ ₹1000 ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆ ಬೀಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.