ADVERTISEMENT

ಸಿಜೆಐ ಪ್ಯಾರಿಸ್‌ ಭೇಟಿ, ಸಭೆ

ಪಿಟಿಐ
Published 4 ಫೆಬ್ರುವರಿ 2026, 16:35 IST
Last Updated 4 ಫೆಬ್ರುವರಿ 2026, 16:35 IST
Mumbai: Chief Justice of India Surya Kant delivers the Fali S. Nariman memorial lecture at the convocation hall of the University of Mumbai, in Mumbai, Saturday, Jan. 24, 2026. (PTI Photo/Shashank Parade)(PTI01_24_2026_000224B)

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಅವರ ಇತ್ತೀಚಿನ ಫ್ರಾನ್ಸ್‌ ಭೇಟಿಯ ವೇಳೆ, ಅಲ್ಲಿನ ಹಿರಿಯ ನ್ಯಾಯಾಂಗ ಅಧಿಕಾರಿಗಳೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದ್ದು, ಇದು ಭಾರತ–ಫ್ರಾನ್ಸ್‌ ಕಾನೂನು ಸಹಕಾರವನ್ನು ಮತ್ತಷ್ಟು ಬಲಪಡಿಸಿದೆ ಎಂದು ಮೂಲಗಳು ತಿಳಿಸಿವೆ. 

ಸಿಜೆಐ ಅವರು ಫ್ರಾನ್ಸ್‌ನಲ್ಲಿರುವ ಭಾರತದ ರಾಯಭಾರಿ ಸಂಜೀವ್‌ ಸಿಂಗ್ಲಾ ಅವರೊಂದಿಗೆ ಫ್ರೆಂಚ್‌ ಸಾಂವಿಧಾನಿಕ ಮಂಡಳಿಯ ಅಧ್ಯಕ್ಷ ರಿಚರ್ಡ್‌ ಫೆರ್ನಾಡ್‌ ಅವರನ್ನು ಭೇಟಿಯಾಗಿ, ನ್ಯಾಯಾಂಗ ತರಬೇತಿ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆಯ ಕುರಿತು ಚರ್ಚೆ ನಡೆಸಿದರು. ಉಪಾಧ್ಯಕ್ಷ ಡಿಡಿಯರ್‌ ಟಬುಟಿಯ ಅವರನ್ನೂ ಸಿಜೆಐ ನೇತೃತ್ವ ನಿಯೋಗ ಭೇಟಿ ಮಾಡಿತು. 

ಇಂಡೊ–ಫ್ರೆಂಚ್‌ ಚೇಂಬರ್‌ ಆಫ್‌ ಕಾಮರ್ಸ್‌, ಪ್ಯಾರಿಸ್‌ ವಕೀಲರ ಸಂಘ ಜಂಟಿಯಾಗಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ಸಿಜೆಐ, ಭಾರತ–ಫ್ರಾನ್ಸ್ ದ್ವಿಪಕ್ಷೀಯ ಸಹಕಾರದ ಬಗ್ಗೆ ಪ್ರಧಾನ ಭಾಷಣ ಮಾಡಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.