ADVERTISEMENT

ಬಡ ದಾವೆದಾರರಿಗೆ ನ್ಯಾಯ ಒದಗಿಸಲು ಮಧ್ಯರಾತ್ರಿವರೆಗೂ ಕೂರಲು ಸಿದ್ಧ: ಸಿಜೆಐ

ಪಿಟಿಐ
Published 28 ನವೆಂಬರ್ 2025, 11:47 IST
Last Updated 28 ನವೆಂಬರ್ 2025, 11:47 IST
<div class="paragraphs"><p>ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯ ಕಾಂತ್ ಪ್ರಮಾಣ ವಚನ ಸ್ವೀಕರಿಸಿದರು</p><p></p></div>

ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸೂರ್ಯ ಕಾಂತ್ ಪ್ರಮಾಣ ವಚನ ಸ್ವೀಕರಿಸಿದರು

   

– ಸುಪ್ರೀಂ ಕೋರ್ಟ್ ಚಿತ್ರ

ADVERTISEMENT

ನವದೆಹಲಿ: ಬಡ ದಾವೆದಾರರಿಗೆ ನ್ಯಾಯ ಒದಗಿಸುವುದು ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಅವರಿಗಾಗಿ ಮಧ್ಯರಾತ್ರಿಯವರೆಗೆ ನ್ಯಾಯಾಲಯದಲ್ಲಿ ಕುಳಿತುಕೊಳ್ಳಲು ಸಿದ್ಧನಿದ್ದೇನೆ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಶುಕ್ರವಾರ ಹೇಳಿದ್ದಾರೆ.

ಕೇಂದ್ರ ಮತ್ತು ಇತರರ ವಿರುದ್ಧ ತಿಲಕ್ ಸಿಂಗ್ ಡಾಂಗಿ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವಾಗ ಸಿಜೆಐ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ನನ್ನ ನ್ಯಾಯಾಲಯದಲ್ಲಿ ಯಾವುದೇ ಐಷಾರಾಮಿ ಮೊಕದ್ದಮೆಗಳಿಲ್ಲ’ಎಂದು ಸಿಜೆಐ ಹೇಳಿದ್ದಾರೆ.

'ನಾನು ನಿಮಗೆ ಒಂದು ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಕೊನೆಯ ಸಾಲಿನಲ್ಲಿ ಕುಳಿತಿರುವ ಅತ್ಯಂತ ದುರ್ಬಲ, ಬಡ ದಾವೆದಾರರಿಗಾಗಿ ನಾನು ಇಲ್ಲಿದ್ದೇನೆ. ಅಗತ್ಯವಿದ್ದರೆ, ಅವರಿಗಾಗಿ ನಾನು ಮಧ್ಯರಾತ್ರಿಯವರೆಗೆ ಇಲ್ಲಿ ಕುಳಿತುಕೊಳ್ಳುತ್ತೇನೆ’ಎಂದು ಅವರು ಹೇಳಿದ್ದಾರೆ.

ಹರಿಯಾಣದ ಹಿಸಾರ್ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ನವೆಂಬರ್ 24ರಂದು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸುಮಾರು 15 ತಿಂಗಳುಗಳ ಕಾಲ ಅವರು ಆ ಹುದ್ದೆಯಲ್ಲಿ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.