ADVERTISEMENT

ಅಲೀಗಢ: 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ

ಪಿಟಿಐ
Published 29 ಡಿಸೆಂಬರ್ 2023, 13:15 IST
Last Updated 29 ಡಿಸೆಂಬರ್ 2023, 13:15 IST
<div class="paragraphs"><p> ಸಾಮೂಹಿಕ ಅತ್ಯಾಚಾರ (ಸಾಂದರ್ಭಿಕ ಚಿತ್ರ)</p></div>

ಸಾಮೂಹಿಕ ಅತ್ಯಾಚಾರ (ಸಾಂದರ್ಭಿಕ ಚಿತ್ರ)

   

ಅಲೀಗಢ: ಇಲ್ಲಿನ ಹೊಟೇಲ್ ಒಂದರಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿನಿ ಮೇಲೆ 4 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಹೋಟೆಲ್ ಮಾಲೀಕ ಹಾಗೂ ಆತನ ಸಂಬಂಧಿಯನ್ನು ಬಂಧಿಸಲಾಗಿದೆ. ಸ್ಥಳೀಯಾಡಳಿತ ಹೋಟೆಲ್‌ಗೆ ಬೀಗ ಜಡಿದಿದೆ.

ADVERTISEMENT

‘15 ವರ್ಷದ ಬಾಲಕಿಯೊಬ್ಬಳು ಬುಧವಾರ ಕಾಣೆಯಾಗಿದ್ದಳು. ಬಳಿಕ ಆಕೆ ಪಕ್ಕದ ಹೋಟೆಲ್ ಒಂದರ ಕೋಣೆಯಲ್ಲಿ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು’ ಎಂದು ಪೊಲೀಸ್‌ ವರಿಷ್ಠಾಧಿಕಾರಿ (ನಗರ) ಶೇಖರ್‌ ಪಾಠಕ್‌ ಶುಕ್ರವಾರ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಪ್ರಲೋಭಿಸಿ ಹೋಟೆಲ್‌ ಕೊಠಡಿಗೆ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ದೂರಿನನ್ವಯ ಪೊಲೀಸರು, ಹೋಟೆಲ್ ಮಾಲೀಕ ವೇದ ಪ್ರಕಾಶ ವರ್ಮಾ, ಆತನ ಸಂಬಂಧಿಕ ನೀರಜ್‌ ಶರ್ಮಾ ಹಾಗೂ ಇಬ್ಬರು ಅಪರಿಚಿತ ವ್ಯಕ್ತಿಗಳ ಮೇಲೆ ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯಡಿ ‍ಎಫ್‌ಐಆರ್‌ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಇಬ್ಬರ ಪತ್ತೆಗೆ ಕಾರ್ಯಾಚರಣೆ ಜಾರಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.