ನವದೆಹಲಿ:ಕೋವಿಡ್-19 ಬಿಕ್ಕಟ್ಟು ಇರುವ ಈ ಪರಿಸ್ಥಿತಿಯಲ್ಲಿ 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳು ಫೇಲಾದರೆ ಅವರಿಗೆ ಮತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಸಿಬಿಎಸ್‌ಇ ಹೇಳಿದೆ.
9 ಮತ್ತು 11 ನೇ ತರಗತಿಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳೇ ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪರೀಕ್ಷೆ ನಡೆಸಬೇಕು. ಕೋವಿಡ್-19 ಬಿಕ್ಕಟ್ಟು ಇರುವ ಕಾರಣ ಮಾತ್ರ ಈ ವರ್ಷ ಈ ರೀತಿಯ ಅವಕಾಶವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಸಿಬಿಎಸ್‌ಇ ಕಂಟ್ರೋಲರ್ ಸನ್ಯಮ್ ಭಾರಧ್ವಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.