ADVERTISEMENT

ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್‌ನಲ್ಲಿ ಮೇಘಸ್ಫೋಟ, ಮೂವರು ಕಾರ್ಮಿಕರ ಸಾವು

ಐಎಎನ್ಎಸ್
Published 9 ಮೇ 2022, 16:41 IST
Last Updated 9 ಮೇ 2022, 16:41 IST
ಮೇಘಸ್ಫೋಟ: ಪ್ರಾತಿನಿಧಿಕ ಚಿತ್ರ
ಮೇಘಸ್ಫೋಟ: ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ಸೋಮವಾರ ಮೇಘಸ್ಫೋಟದಿಂದ ಮೂವರು ಕಾರ್ಮಿಕರು ಸಾವಿಗೀಡಾಗಿದ್ದಾರೆ. ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಬಿರುಗಾಳಿಯಿಂದಾಗಿ 3 ಡಜನ್‌ಗೂ ಹೆಚ್ಚು ಕಟ್ಟಡಗಳು ಹಾನಿಗೊಳಗಾಗಿವೆ.

ವರದಿಗಳ ಪ್ರಕಾರ, ಬಡ್ಗಾಮ್‌ನ ಚಂದಪೋರಾ ಗ್ರಾಮದ ಕಾರ್ಮಿಕರು ಕೆಲಸ ಮಾಡುತ್ತಿದ್ದ ಇಟ್ಟಿಗೆ ಗೂಡಿನ ಮೇಲೆ ಮೇಘಸ್ಫೋಟ ಸಂಭವಿಸಿದೆ.

ಕಾರ್ಮಿಕರನ್ನು ಬಡ್ಗಾಮ್ ಪಟ್ಟಣದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೊದಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

ADVERTISEMENT

ಮೃತರನ್ನು ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ಸಲೀಂ ಮನ್ಸೂರಿ(45), ಕೈಸರ್ ಮನ್ಸೂರಿ(20), ಮತ್ತು ಮೊಹಮ್ಮದ್ ರಯೀಸ್(20) ಎಂದು ಗುರುತಿಸಲಾಗಿದೆ.

ಈ ಮಧ್ಯೆ, ಆಲಿಕಲ್ಲು ಮಳೆ ಜೊತೆ ಹೆಚ್ಚಿನ ವೇಗದ ಗಾಳಿಯಿಂದಾಗಿ ಕಣಿವೆಯಲ್ಲಿ ಹಲವು ಮನೆಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.