ADVERTISEMENT

ಔರಂಗಜೇಬ್‌ಗೆ ಅಖಿಲೇಶ್‌ ಹೋಲಿಸಿ ಟೀಕಿಸಿದ ಯೋಗಿ ಆದಿತ್ಯನಾಥ

​ಪ್ರಜಾವಾಣಿ ವಾರ್ತೆ
Published 11 ಮೇ 2019, 17:17 IST
Last Updated 11 ಮೇ 2019, 17:17 IST
   

ಲಖನೌ: ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌ ಅವರನ್ನು, ತಂದೆಯನ್ನು ಜೈಲಿನಲ್ಲಿಟ್ಟ ದೊರೆ ಔರಂಗಜೇಬನಿಗೆ ಹೋಲಿಸಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶನಿವಾರ ಟೀಕೆ ಮಾಡಿದ್ದಾರೆ.

ಟ್ವೀಟ್‌ ಒಂದರಲ್ಲಿ ಎಸ್‌ಪಿ– ಬಿಎಸ್‌ಪಿ ಮೈತ್ರಿಯನ್ನು ಟೀಕಿಸುತ್ತ, ‘ಈ ಮಹಾಮಿಲಾವಟಿಗಳು’ (ಕಲಬೆರಕೆಗಳು) ನೆರೆ ಬಂದಾಗ ಒಂದೇ ಕಡೆ ಸೇರುವ ಹಾವು, ಚೇಳು, ಕಪ್ಪೆಗಳಿದ್ದಂತೆ. ಔರಂಗಜೇಬನಂತೆ, ತನ್ನ ತಂದೆಯನ್ನು ಅಧಿಕಾರದಿಂದ ಕಿತ್ತೊಗೆದ ವ್ಯಕ್ತಿಯು ಅಧಿಕಾರಕ್ಕಾಗಿ ಶತ್ರುವಿನ ಜೊತೆ ಕೈಜೋಡಿಸಿದ್ದಾರೆ. ಮೇ 23ರ ನಂತರ ಇವರು ಪರಸ್ಪರರನ್ನು ನಿಂದಿಸಲಿದ್ದಾರೆ’ ಎಂದಿದ್ದಾರೆ.

ಆದಿತ್ಯನಾಥ ಅವರು ಈ ಹಿಂದೆ ಅಖಿಲೇಶ್‌ ಅವರನ್ನು ‘ಗೂಂಡಾಗಳ ದೊರೆ’ ಎಂದು ಟೀಕಿಸಿ, ‘ಜಾತಿಧರ್ಮಗಳ ಆಧಾರದಲ್ಲೇ ಅವರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತಾರೆ ಮತ್ತು ಸೌಲಭ್ಯಗಳ ಹಂಚಿಕೆ ಮಾಡುತ್ತಾರೆ’ ಎಂದು ಆರೋಪಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.