ADVERTISEMENT

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ – ದೇವೇಂದ್ರ ಫಡಣವೀಸ್ ರಹಸ್ಯ ಮಾತುಕತೆ

ಡೆಕ್ಕನ್ ಹೆರಾಲ್ಡ್
Published 27 ಆಗಸ್ಟ್ 2021, 13:02 IST
Last Updated 27 ಆಗಸ್ಟ್ 2021, 13:02 IST
ಉದ್ಧವ್ ಠಾಕ್ರೆ ಹಾಗೂ ದೇವೇಂದ್ರ ಫಡಣವೀಸ್ (ಪಿಟಿಐ ಸಂಗ್ರಹ ಚಿತ್ರ)
ಉದ್ಧವ್ ಠಾಕ್ರೆ ಹಾಗೂ ದೇವೇಂದ್ರ ಫಡಣವೀಸ್ (ಪಿಟಿಐ ಸಂಗ್ರಹ ಚಿತ್ರ)   

ಮುಂಬೈ: ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನಾ ಮತ್ತು ಬಿಜೆಪಿ ನಡುವೆ ವಾಕ್ಸಮರ ಮುಂದುವರಿದಿರುವ ಮಧ್ಯೆಯೇ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ರಹಸ್ಯ ಸಭೆ ನಡೆಸಿದ್ದಾರೆ.

ಮಲಬಾರ್ ಹಿಲ್‌ನ ಸಹ್ಯಾದ್ರಿ ಅತಿಥಿಗೃಹದಲ್ಲಿ ಒಬಿಸಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಸರ್ವಪಕ್ಷ ಸಭೆಯ ಬಳಿಕ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.

ಫಡಣವೀಸ್ ಜತೆಗಿನ ಮಾತುಕತೆಗೂ ಮುನ್ನ ಉದ್ಧವ್ ಅವರು ಪ್ರವೀಣ್ ದಾರೇಕರ್ ಜತೆ ಚರ್ಚೆ ನಡೆಸಿದ್ದರು.

ADVERTISEMENT

ಆದಾಗ್ಯೂ, ಕೇಂದ್ರ ಸಚಿವ ನಾರಾಯಣ ರಾಣೆ ಅವರು ಉದ್ಧವ್, ಅವರ ಕುಟುಂಬದವರು ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ನನಗೆ ಮಹಾರಾಷ್ಟ್ರ ಸರ್ಕಾರದ ಸಾಕಷ್ಟು ಪ್ರಕರಣಗಳು ತಿಳಿದಿವೆ. ಹಂತ ಹಂತವಾಗಿ ಅವುಗಳನ್ನು ಬಯಲಿಗೆ ಎಳೆಯುತ್ತೇನೆ ಎಂದೂ ರಾಣೆ ಹೇಳಿದ್ದಾರೆ.

ಈ ಮಧ್ಯೆ, ‘ಬಿಜೆಪಿ ಮತ್ತು ನನ್ನ ಪಕ್ಷವು ಈ ಹಿಂದೆ ಅನೇಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದವು. ಆದರೆ ಹಿಂದುತ್ವದ ವಿಚಾರದಲ್ಲಿ ಒಂದೇ ನಿಲುವು ಹೊಂದಿವೆ’ ಎಂದು ಶಿವಸೇನಾ ಮುಖ್ಯ ವಕ್ತಾರ ಸಂಜಯ್ ರಾವುತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.