ADVERTISEMENT

ತೆಲಂಗಾಣ: ಕಾಲೇಜು ವಿದ್ಯಾರ್ಥಿನಿ ಅಪಹರಣ, ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 15:47 IST
Last Updated 20 ಡಿಸೆಂಬರ್ 2022, 15:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: 18 ವರ್ಷ ವಯಸ್ಸಿನ ವಿದ್ಯಾರ್ಥಿನಿಯನ್ನು ನಾಲ್ಕು ಜನರ ಗುಂಪೊಂದು ಅಪಹರಿಸಿ ಕಾರಿನಲ್ಲಿ ಕರೆದುಕೊಂಡು ಹೋದರು ಎನ್ನಲಾದ ಘಟನೆಯು ತೆಲಂಗಾಣ ರಾಜನ್ನಾ ಸಿರ್ಸಿಲಾ ಜಿಲ್ಲೆಯ ಮೋಡೆಪಲ್ಲೆ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 5:30ಕ್ಕೆ ನಡೆದಿದೆ.

ಯುವತಿಯು ತನ್ನ ತಂದೆ ಜೊತೆ ದೇವಸ್ಥಾನಕ್ಕೆ ತೆರಳಿದ್ದಾಗ ಈ ಘಟನೆ ನಡೆದಿದೆ. ಹತ್ತಿರದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಅಪಹರಣದ ದೃಶ್ಯ ಸೆರೆಯಾಗಿದೆ.ಬಳಿಕ, ಯುವತಿ ತಂದೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗಳನ್ನು ಅಪಹರಿಸುವ ಮುನ್ನ ತಮ್ಮನ್ನು ಆರೋಪಿಗಳು ಥಳಿಸಿದ್ದಾಗಿ ಮತ್ತು ಆರೋಪಿಗಳಲ್ಲಿ ಒಬ್ಬ ತಮ್ಮ ಗ್ರಾಮದ ನಿವಾಸಿ ಎಂದು ದೂರಿನಲ್ಲಿ ಹೇಳಿದ್ದಾರೆ.

ಪೊಲೀಸರ ಪ್ರಕಾರ, ಶಂಕಿತರಲ್ಲಿ ಒಬ್ಬನು ಈ ಹಿಂದೆ ಯುವತಿ ಜೊತೆ ಓಡಿ ಹೋಗಿದ್ದ. ಪೊಲೀಸರು ಸಮಾಲೋಚನೆ ನಡೆಸಿದ ಬಳಿಕ ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದ.ಯುವತಿಗೆ ಬೇರೊಬ್ಬ ವ್ಯಕ್ತಿ ಜೊತೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದ ಆರೋಪಿಯು ತನ್ನ ಸ್ನೇಹಿತರ ಜೊತೆಗೂಡಿ ಅಪಹರಣದ ಸಂಚು ರೂಪಿಸಿದ್ದಾನೆ. ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲು ಮತ್ತು ಯುವತಿಯನ್ನು ರಕ್ಷಿಸಲು ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಅಪಹರಣದ ದೃಶ್ಯಗಳನ್ನು ಸ್ಥಳೀಯ ಟಿವಿ ವಾಹಿನಿಗಳೂ ಪ್ರಸಾರ ಮಾಡಿವೆ. ಮಗಳನ್ನು ರಕ್ಷಿಸಲು ತಂದೆ ಮಾಡುವ ವ್ಯರ್ಥ ಪ್ರಯತ್ನವೂ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.