ADVERTISEMENT

8.92 ಲಕ್ಷ ವಿವಿಪ್ಯಾಟ್‌ ತಯಾರಿಗೆ ಮುಂದಾದ ಆಯೋಗ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 4:42 IST
Last Updated 20 ಏಪ್ರಿಲ್ 2023, 4:42 IST
   

ನವದೆಹಲಿ (ಪಿಟಿಐ): ‘ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಕೈಗೊಂಡಿರುವ ಕೇಂದ್ರ ಚುನಾವಣಾ ಆಯೋಗವು ಹೊಸದಾಗಿ 8.92 ಲಕ್ಷ ವಿವಿಪ್ಯಾಟ್‌ಗಳನ್ನು ತಯಾರಿಸಲು ಮುಂದಾಗಿದೆ’ ಎಂದು ಮೂಲಗಳು ಬುಧವಾರ ತಿಳಿಸಿವೆ.

‘ಎಂ–2 ಮಾದರಿಯ ಒಟ್ಟು 2.71 ಲಕ್ಷ ವಿವಿಪ್ಯಾಟ್‌ ಯಂತ್ರಗಳನ್ನು ಬಳಸದಿರಲು ನಿರ್ಧರಿಸಿರುವ ಆಯೋಗವು ನಿರ್ವಹಣೆ ಕಾರ್ಯಕ್ಕಾಗಿ 3.43 ಲಕ್ಷ ವಿವಿಪ್ಯಾಟ್‌ಗಳನ್ನು ಗುರುತಿಸಿದೆ. 2.43 ವಿವಿಪ್ಯಾಟ್‌ಗಳನ್ನು ಮೇಲ್ದರ್ಜೆಗೇರಿಸಲೂ ಮುಂದಾಗಿದೆ’ ಎಂದು ಹೇಳಿವೆ.

‘ಚುನಾವಣೆಗೂ ಮುನ್ನ ಪ್ರತಿ ರಾಜ್ಯದಲ್ಲೂ ಇವಿಎಂ ಹಾಗೂ ವಿವಿಪ್ಯಾಟ್‌ಗಳನ್ನು ಪರೀಕ್ಷಿಸುವ ಪ್ರಕ್ರಿಯೆಯನ್ನೂ ಆಯೋಗ ಕೈಗೊಳ್ಳಲಿದೆ’ ಎಂದು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.